

ಚಿತ್ರದುರ್ಗ: ತಾಲೂಕಿನ ಓ.ಚಿ.ಬೋರಯ್ಯ ಬಡಾವಣೆಯಲ್ಲಿ ಗುಡಿಸಲು ನಿರ್ಮಿಸಿಕೊಂಡಿರುವ ನಿವಾಸಿಗಳು ಹಕ್ಕು ಪತ್ರ ನೀಡಬೇಕೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಬಳಿ ಬೇಡಿಕೆ ಇಟ್ಟರು.
ಕಾನೂನಾತ್ಮಕವಾಗಿ ಸಕ್ರಮ ಮಾಡಿಕೊಡಲು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸಬೇಕಿದೆ. ಹೀಗಾಗಿ ಸಮಯಾವಕಾಶ ಬೇಕಿದೆ ಎಂದು ಶಾಸಕರು ಜನರ ಮನವೊಲಿಸಿದರು. ತಹಶೀಲ್ದಾರ್ ನಾಗವೇಣಿ, ತಾಪಂ ಇಒ ಹನುಮಂತಪ್ಪ ಇತರರಿದ್ದರು.