ಹಕ್ಕುಗಳ ಮಹತ್ವ ಅರಿತು ಅಭಿವೃದ್ಧಿ ಸಾಧಿಸಿ

SRP_26-03jpj
Published on

 ಶ್ರೀರಂಗಪಟ್ಟಣ : ಸಂವಿಧಾನ ನೀಡಿರುವ ಹಕ್ಕುಗಳ ಮಹತ್ವ ಅರಿತು ಪ್ರತಿಯೊಬ್ಬರೂ ಅಭಿವೃದ್ಧಿ ಸಾಧಿಸಬೇಕು ಎಂದು ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್.ವೆಂಕಟೇಶ್ ತಿಳಿಸಿದರು.

ಪಟ್ಟಣದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಗೌರವ ನೀಡಿದೆ. ಹಾಗಾಗಿ ನಾವೆಲ್ಲರೂ ಅದಕ್ಕೆ ಪ್ರತಿಗೌರವ ಸೂಚಿಸಲು ಸಭ್ಯ ನಾಗರಿಕರಾಗಬೇಕು. ಭಾರತದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಮತೆ ಹಾಗೂ ಮೂಲಭೂತ ಹಕ್ಕುಗಳನ್ನು ಪ್ರತಿಯೊಬ್ಬರೂ ಸಂಭ್ರಮಿಸಬೇಕು. ಅದನ್ನು ಬಳಸಿಕೊಂಡು ದೇಶದ ಪ್ರಗತಿಗೆ ಬೆಂಬಲಿಸಬೇಕು ಎಂದರು.

ಸಂವಿಧಾನದ ಉತ್ಸವವನ್ನು ಪಟ್ಟಣದಲ್ಲಿ ಪ್ರಜ್ಞಾವಂತರ ವೇದಿಕೆ ವತಿಯಿಂದ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದು ಇತರರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು.

ವರವಾಗಿದೆ: ದಸಂಸ ಮುಖಂಡ ಗುರುಪ್ರಸಾದ್ ಮಾತನಾಡಿ, ಸಾಮಾಜಿಕ ಶೋಷಣೆಯಿಂದ ಹೊರಬರಲು ಸಂವಿಧಾನನಮ್ಮೆಲ್ಲರಿಗೆ ವರವಾಗಿದೆ ಎಂದರು. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಹಕ್ಕುಗಳನ್ನು ಸೂಕ್ತವಾಗಿ ಬಳಸಿಕೊಂಡು ಶೋಷಣೆ ಮುಕ್ತ ಜೀವನವನ್ನು ಎಲ್ಲರೂ ನಡೆಸಲು ಈ ಸಂದರ್ಭ ಸಂಕಲ್ಪ ಮಾಡಬೇಕು ಎಂದು ಅವರು ಸಲಹೆ ನೀಡಿದರು. ವಿವಿಧ ಸಂಘಟನೆ, ಸಂಸ್ಥೆಗಳ ಮುಖಂಡರಾದ ಮಂಗಳೂರು ವಿಜಯ್, ಶಂಭೂಗೌಡ,ಟೈಲರ್ ಶಿವಕುಮಾರ್, ಕ್ಯಾತನಹಳ್ಳಿ ಚಂದ್ರಣ್ಣ, ಬಾಲಕೃಷ್ಣ, ಪಾಂಡು, ಸಾಹಿತಿ ಸಾವೇರ ಸ್ವಾಮಿ, ನಿವೃತ್ತ ಕೃಷಿ ಅಧಿಕಾರಿ ಕೆ.ಟಿ.ರಂಗಯ್ಯ, ರಂಗನಾಯಕಿ ಸ್ತ್ರೀಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಕರ್ನಾಟಕ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ, ಕರುನಾಡ ವೇದಿಕೆ ಅಧ್ಯಕ್ಷೆ ಪ್ರಿಯಾ ರಮೇಶ್, ಪ್ರಜ್ಞಾವಂತರ ವೇದಿಕೆಯ ಪದಾಧಿಕಾರಿಗಳಾದ ಪಾಲಹಳ್ಳಿ ಅನಿಲ್, ಜಯಶಂಕರ್, ಚಿಕ್ಕತಮ್ಮೇಗೌಡ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net