ಹಕ್ಕು ಪತ್ರ ವಿತರಣೆಗೆ ಒತ್ತಾಯಿಸಿ ಪ್ರತಿಭಟನೆ

CTD 1 STRIKE--03
Published on

ಚಿತ್ರದುರ್ಗ: ಕೊಳಗೇರಿ ನಿವಾಸಿಗಳು,ನಗರದ ಬಡವರಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂ ಘಟನೆ ಜಿಲ್ಲಾ ಸಮಿತಿ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.

ನಗರದಲ್ಲಿರುವ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದಲೂ ವಾಸವಿರುವ ಬಡ ಕುಟುಂಬಗ ಳಿಗೆ ಹಕ್ಕುಪತ್ರ ವಿತರಿಸಬೇಕು. 2022ಸೆಪ್ಟೆಂಬರ್‌ನಲ್ಲಿ ವಿತರಿಸಿರುವ ಹಕ್ಕುಪತ್ರಗಳಿಗೆ ಖಾತೆ ಮಾಡಿಸಿಕೊಡಬೇಕು.

ಆಶ್ರಯ ಬಡಾವಣೆ ನಿವಾಸಿಗಳಿಗೆ ಇ-ಸ್ವತ್ತು ಮತ್ತು ಸಾಲ ತೀರುವಳಿ ಪತ್ರ ಕೊಡಬೇಕು.ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವ್ಯಾಪ್ತಿಯ 100 ಗುಂಪು ಮನೆಗಳಿಗೆ ಹಕ್ಕುಪತ್ರ ಇಲ್ಲವೇ ನೊಂದಣಿ ಮಾಡಿಸಬೇಕೆಂದು ಸಮಿತಿ ಜಿಲ್ಲಾಧ್ಯಕ್ಷ ಗಣೇಶ್ ಸರ್ಕಾರವನ್ನು ಒತ್ತಾ ಯಿಸಿದರು. ಅಯೂಬ್‌ಖಾನ್,ಸೈಫುಲ್ಲಾ,ಮಹಬೂಬಿ,ಶಬೀನಾಜಾನ್,ಮೈಲಾರಪ್ಪ,ಲೀಲಾವತಿ,ರಜೀಯಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net