

ಹೊಸಪೇಟೆ: ಹಂಪಿ ಉತ್ಸವ ಆಚರಣೆ ಯಶಸ್ವಿಗೆ ಸಂಘ-ಸಂಸ್ಥೆ ಹಾಗೂ ಸರ‍್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರ‍್ಪಡಿಸಿದ್ದ ಹಂಪಿ ಉತ್ಸವದ ಪರ‍್ವಸಿದ್ದತೆಗೆ ಸಂಘ-ಸಂಸ್ಥೆಗಳ ಸಲಹಾ ಸಭೆಯಲ್ಲಿ ಮಾತನಾಡಿದರು. ಹಿಂದಿನ ಬಾರಿ ಹಂಪಿ ಉತ್ಸವಕ್ಕೆ ಎಲ್ಲರ ಸಹಕಾರದಿಂದಲೇ ಯಶಸ್ವಿಯಾಗಿದೆ. ಈ ಬಾರಿ ಸಹ ಅದ್ದೂರಿಯಾಗಿ ಜನೋತ್ಸವ ಮಾದರಿಯಂತೆ ಆಚರಿಸಲು ಸಿದ್ದತೆ ಕೈಗೊಳ್ಳಲಾಗುತ್ತದೆ ಎಂದರು.
ಉತ್ಸವದಲ್ಲಿ ದಿ.ಎಂ.ಪಿ.ಪ್ರಕಾಶ್‌ರವರ ಹೆಸರಿನಲ್ಲಿ ಮುಖ್ಯ ವೇದಿಕೆ ನರ‍್ಮಿಸುವ ಮೂಲಕ ಅವರನ್ನು ಸ್ಮರಿಸುವ ಕೆಲಸ ಆಗಬೇಕಿದೆ. ನಗರದಲ್ಲಿ ವಡಕರಾಯ ದೇಗುಲದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯುತ್ತಿದ ವಸಂತ ವೈಭವ ಕರ‍್ಯಕ್ರಮವನ್ನು ಆಯೋಜಿಸಬೇಕು. ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಆಯೋಜಿಸುವ ಕವಿಗೋಷ್ಠಿಯಲ್ಲಿ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಕವಿಗೋಷ್ಠಿಯನ್ನು ನರ‍್ವಹಿಸಬೇಕು. ಕವಿಗಳಿಗೆ ವೇದಿಕೆಯಲ್ಲಿ ಆಸನ ಕಲ್ಪಿಸಿ ಗೌರವದಿಂದ ನಡೆಸಿಕೊಳ್ಳಬೇಕು. ಹಂಪಿ ಉತ್ಸವದಲ್ಲಿ ಸ್ವಾಗತಿಸುವ ಮತ್ತು ಸನ್ಮಾನಿಸುವ ವೇಳೆ ಕನ್ನಡ ಶಾಲುಗಳನ್ನು ಬಳಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಂಪಿಯಲ್ಲಿ ಗಮನರ‍್ಹವಾದ ಧ್ವನಿ ಮತ್ತು ಬೆಳಕು ಕರ‍್ಯಕ್ರಮದಲ್ಲಿ ಸ್ಥಳೀಯ ಭರತನಾಟ್ಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕು. ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವಿಚಾರ ಸಂಕೀರಣ, ಜಾನುವಾರುಗಳ ಪ್ರರ‍್ಶನ, ಸಿರಿಧಾನ್ಯ ಮಳಿಗೆಗಳನ್ನು ಆಚ್ಚುಕಟ್ಟಾಗಿ ಆಯೋಜಿಸಬೇಕು. ಯುವಕರಿಗೆ, ಕ್ರೀಡಾಪಟುಗಳಿಗೆ ಒಳಗೊಂಡು ಗ್ರಾಮೀಣ ಕ್ರೀಡೆಗಳು, ಕ್ರೀಡಾಪಟುಗಳಿಗೆ ಗೌರವ ಸನ್ಮಾನ ಮಾಡಬೇಕು. ವಿಐಪಿ ಪಾಸ್‌ಗಳನ್ನು ದರ‍್ಬಳಕೆಗೆ ಕಡಿವಾಣ, ವಾಹನಗಳ ಪರ‍್ಕಿಂಗ್ ಸೂಕ್ತ ವ್ಯವಸ್ಥೆ, ವಿಕಲಚೇತನ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ, ಹಂಪಿಯ ಸ್ಮಾರಕಗಳ ಬಳಿ ವಿದ್ಯುತ್ ದೀಪಾಲಂಕಾರ ಸೇರಿದಂತೆ ಅನೇಕ ಸಲಹೆಗಳನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೀಡಿದರು.
ಉಪವಿಭಾಗಿಯಾಧಿಕಾರಿ ವಿವೇಕಾನಂದ, ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ, ಕನ್ನಡ ಮತ್ತು ಸಂಸೃತಿ ಇಲಾಖೆ ಸಹಾಯಕ ನರ‍್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ಅಶ್ವಿನ್ ಕೊತಂಬರಿ, ವೈ.ಯಮುನೇಶ್, ಸಾಲಿಸಿದ್ದಯ್ಯ ಇತರರಿದ್ದರು.