ಹಂದಿಯ ಚಿಪ್ಪು ಮಾರಾಟ ಯತ್ನ

29sdp2
Published on

ಸಿದ್ದಾಪುರ: ತಾಲೂಕಿನ ಹಲಗೇರಿ ಪಬ್ಲಿಕ್ ಶಾಲೆಯ ಹತ್ತಿರ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ವಿನಾಶದಂಚಿನಲ್ಲಿರುವ ಅಪರೂಪದ ಚಿಪ್ಪು ಹಂದಿ ಬೇಟೆಯಾಡಿ 850 ಗ್ರಾಂ ಚಿಪ್ಪು ಸಂಗ್ರಹಿಸಿ ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿದ್ದಾಪುರ ಪಿಎಸ್​ಐ ಮಂಜುನಾಥ ರ್ಬಾ ಹಾಗೂ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಆರ್​ಎಫ್​ಒ ಶಿವಾನಂದ ನಿಂಗಾಣಿ ಅವರ ಮಾರ್ಗದರ್ಶನದಲ್ಲಿ ಮಾವಿನಗುಂಡಿ ಉಪವಲಯ ಅರಣ್ಯಾಧಿಕಾರಿ ಶಶಿಧರ ಎಲ್.ಜಿ., ಸಿದ್ದಾಪುರ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಸ್ವಾಮಿ, ಸಂತೋಷ ವಿ. ಶೆಟ್ಟಿ ಅವರು ಆರೋಪಿಗಳಾದ ನಾಗಭೂಷಣ ರಾಮಕೃಷ್ಣ ನಾಯ್ಕ ಬಸವನಬೈಲ್ ಹಾಗೂ ಯೋಗೇಶ ಕೃಷ್ಣ ನಾಯ್ಕ ಬೇಡ್ಕಣಿ ಎಂಬುವರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ವೇಳೆ ಅರಣ್ಯ ಇಲಾಖೆಯ ಮಂಜುನಾಥ ಹುಲ್ಲೂರು, ಅಮರಚಂದ್ರಶೇಖರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net