ಹಂತಕರು ಉಳಿದಿದ್ದು ವಿಜಯ ನಗರದಲ್ಲಿ?

Crime Logo
Published on

ಹುಬ್ಬಳ್ಳಿ: ಧಾರವಾಡದ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿಗಳು ಇಲ್ಲಿಯ ವಿಜಯ ನಗರದ ಮನೆಯೊಂದರಲ್ಲಿ ಉಳಿದುಕೊಂಡಿದ್ದರು ಎಂಬ ಮಾಹಿತಿ ಕಲೆಹಾಕಿದ್ದಾರೆ.

ವಿಜಯ ನಗರದಲ್ಲಿ ಸ್ವಂತ ಮನೆ ಹೊಂದಿರುವವನೊಬ್ಬ ಗಲ್ಪ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದಾನೆ. ಆತನ ಮನೆ ಕೀಲಿ ಧಾರವಾಡದ ಯುವಕನೊಬ್ಬನ ಬಳಿ ಇತ್ತು. ಆ ಯುವಕನು ಹಂತಕರ ತಂಡದಲ್ಲಿದ್ದು, ಹೊರಗಿನಿಂದ ಬಂದ ಮತ್ತು ಸ್ಥಳೀಯ ಆರೋಪಿಗಳನ್ನು ಹುಬ್ಬಳ್ಳಿ ವಿಜಯ ನಗರದಲ್ಲಿಯ ನಿರ್ದಿಷ್ಟ ಮನೆಗೆ ಕರೆತಂದು ಉಳಿಸಿದ್ದನು ಎನ್ನಲಾಗಿದೆ. ಕಾರವಾರ ರಸ್ತೆಯಲ್ಲಿ ಗುಡಿಹಾಳ ತಿರುವಿನ ಬಳಿ ಫ್ರೂಟ್ ಇರ್ಫಾನ್ ಹತ್ಯೆಯಲ್ಲಿ ಪಾಲ್ಗೊಂಡ ಹೊರ ರಾಜ್ಯದವರು ಪರಾರಿಯಾಗಿದ್ದಾರೆ. ಕೃತ್ಯದಲ್ಲಿ ಭಾಗಿಯಾದ ಸ್ಥಳೀಯ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net