ಹಂತ ಹಂತವಾಗಿ ವಿನಾಯಕ ಬಡಾವಣೆ ಅಭಿವೃದ್ಧಿ

29Kush01
Published on

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತ್ತಿಯ ಎರಡನೇ ವಾರ್ಡ್‌ನ ವಿನಾಯಕ ಬಡಾವಣೆಯಲ್ಲಿ 2.25 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಗತಿಯಲಿದ್ದು ಗ್ರಾಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಶನಿವಾರ ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮೂರು ಮೀಟರ್ ಅಗಲ, 34 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ವಿನಾಯಕ ಬಡಾವಣೆಯ ರಾಜು ಎಂಬುವರ ಮನೆಯಿಂದ ಪುಷ್ಪಾ ಎಂಬುವರ ಮನೆವರೆಗೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.

ಅಭಿವೃದ್ಧಿ ಶೂನ್ಯವಾಗಿದ್ದ ವಿನಾಯಕ ಬಡಾವಣೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ನಿಧಿ, ಹದಿನೈದನೇ ಹಣಕಾಸು ಯೋಜನೆ, ಶಾಸಕರ ಅನುದಾನ, ನರೇಗಾ ಯೋಜನೆ ಸೇರಿದಂತೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮಾಡಲಾಗಿದೆ ಎಂದು ಕೆ.ಬಿ.ಶಂಶುದ್ಧೀನ್ ಹೇಳಿದರು.

ವಿನಾಯಕ ಬಡಾವಣೆ ನಿವಾಸಿಗಳಾದ ಪುಷ್ಪಾ, ಶಿವಾನಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net