ಹಂತ ಹಂತವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ

oppo_0
oppo_0
Published on

ಬೈಲಕುಪ್ಪೆ: ಗ್ರಾಮೀಣ ಭಾಗದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಪಶು ಸಂಗೋಪನ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮುತ್ತಿನಮುಳಸೋಗೆ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮದ ಹೊರ ವಲಯದಲ್ಲಿರುವ ಬೋರೆ ಸಮೀಪ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗುವುದು. ಲಕ್ಷ್ಮೀಪುರ ಗ್ರಾಮದ ಗಿರಿಜನ ಹಾಡಿಯ ಮುಖ್ಯರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ದಿಂಡಗಾಡು ಗ್ರಾಮದ ಬಸವೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಈಗಾಗಲೇ ಹಣ ಮಂಜೂರು ಮಾಡಿಸಲಾಗಿದೆ ಎಂದರು.

ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಹಮತ್ ಜಾನ್ ಬಾಬು, ಆವರ್ತಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಕೊಪ್ಪ ಗ್ರಾಪಂ ಅಧ್ಯಕ್ಷೆ ಗೀತಾ, ಸದಸ್ಯ ಮುತ್ತಿನಮುಳಸೋಗೆ ಎಂ.ಬಿ.ಶಿವಕುಮಾರ್, ಮುಖಂಡರಾದ ಕಲ್ಯಾಣಪ್ಪ, ಭುಜಂಗ, ಶೇಖರ್, ಶಿವಪ್ಪ, ಪ್ರಕಾಶ, ಧನರಾಜ್, ಶೇಕ್‌ಅಸ್ಲಾಂ, ಕೆ.ಕೆ.ರಾಮಸ್ವಾಮಿ, ಪುಟ್ಟರಾಜು, ಮಹಾದೇವಪ್ಪ, ಶಿವು, ನಾಗಪ್ಪ, ತಹಸೀಲ್ದಾರ್ ನಿಸರ್ಗಪ್ರಿಯಾ, ಕಾರ್ಯ ನಿರ್ವಹಣಾಧಿಕಾರಿ ಸುನಿಲ್, ಅಧಿಕಾರಿ ಸೋಮಯ್ಯ, ಇಂಜಿನಿಯರ್ ಕುಮಾರ್, ಮಮತಾ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net