ಹಂಡ್ಲಿ ಗ್ರಾಪಂಗೆ ಸುಧಾ ಅಧ್ಯಕ್ಷೆ, ಅಶೋಕ್ ಉಪಾಧ್ಯಕ್ಷ

ಹಂಡ್ಲಿ ಗ್ರಾಪಂ ಚುನಾವಣೆ
ಹಂಡ್ಲಿ ಗ್ರಾ.ಪಂ.ಆಡಳಿತ ಮಂಡಳಿ 2ನೇ ಅವಧಿಗೆ ಆಯ್ಕೆಯಾದ ವರಿಷ್ಠರು
Published on

ಶನಿವಾರಸಂತೆ: ಸಮಿಪದ ಹಂಡ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ 2ನೇ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸುಧಾ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಸ್ಥಾನಕ್ಕೆ ಬಸವರಾಜು ಮತ್ತು ಎಚ್.ಎಸ್.ಅಶೋಕ್ ಸ್ಪರ್ಧಿಸಿದ್ದರು. ಎಚ್.ಎಸ್.ಅಶೋಕ್ 6 ಮತಗಳನ್ನು ಪಡೆದು ಜಯಗಳಿಸಿದರೆ ಬಸವರಾಜು 5 ಮತಗಳನ್ನು ಪಡೆದು ಸೋತರು.

ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಗ್ರಾ.ಪಂ. ಪಿಡಿಒ ಮೇದಪ್ಪ, ಕಾಂಗ್ರೆಸ್ ವಲಯ ಅಧ್ಯಕ್ಷ ವೀರೇಂದ್ರಕುಮಾರ್, ಕಾಂಗ್ರೆಸ್ ಪ್ರಮುಖರಾದ ಜಿ.ಎಂ.ಕಾಂತರಾಜ್, ಶರತ್‌ಶೇಖರ್, ಎಸ್.ಕೆ.ಶಿವಪ್ಪ, ಜರ್ನಾಧನ್, ಮಹಮ್ಮದ್‌ಖನ್ನಾ, ಭರತ್, ಅಶ್ವಥ್ , ಲಕ್ಷ್ಮಿ ಶೆಟ್ಟರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net