

ಕಂಪ್ಲಿ: ಪಟ್ಟಣದಲ್ಲಿ ಅಲೆಮಾರಿ ಬುಡಕಟ್ಟು ಹಂಡಿ ಜೋಗಿ ಸಮುದಾಯದಿಂದ ಈರನಾಗಮ್ಮ ದೇವರ ಗಂಗೆಸ್ಥಳ ಮೆರವಣಿಗೆ ಮಂಗಳವಾರ ನಡೆಯಿತು.
ತುಂಗಭದ್ರಾ ನದಿ ತಟದಿಂದ ಆರಂಭಗೊಂಡ ಮೆರವಣಿಗೆಗೆ ಹಂಡಿಜೋಗಿ ಸಮಾಜದ ತಾಲೂಕು ಅಧ್ಯಕ್ಷ ರಾಣಪ್ಪ ಮಾಸ್ಟರ್ ಚಾಲನೆ ನೀಡಿದರು. ಒಳ ಮೀಸಲಾತಿ ಶೀಘ್ರ ಜಾರಿಗೊಳಿಸಿ ಹಂಡಿಜೋಗಿ ಸಮುದಾಯಕ್ಕೆ ನ್ಯಾಯ ಕಲ್ಪಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಬೇಕು. ಸಮುದಾಯದವರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಲು ಸ್ಥಳೀಯ ಆಡಳಿತ ಮುಂದಾಗಬೇಕು. ಈರನಾಗಮ್ಮ ದೇವಸ್ಥಾನಕ್ಕೆ ಗೋಪುರ ನಿರ್ಮಿಸಲು ಭಕ್ತರ ಸಹಕಾರ ಅಗತ್ಯ ಎಂದರು.
ಜಿಲ್ಲಾಧ್ಯಕ್ಷ ರಮೇಶ್ ಜೋಗಿ, ಪದಾಧಿಕಾರಿಗಳಾದ ಜೆ.ಶಂಕರ್ ಹುಣಸಗಿ, ಮಹೇಶ್, ವಿನೋದ್, ರಾಮಕೃಷ್ಣ, ನಾಗರಾಜ ಇತರರಿದ್ದರು.