ಹಂಚೀಪುರ ಗ್ರಾಪಂ ಕಚೇರಿಗೆ ಹಾನಿ

23 SARAG 2
ಹಂಚೀಪುರ ಗ್ರಾಮ ಪಂಚಾಯಿತಿ ಕಟ್ಟಡದ ಛಾವಣಿ ಗಾಳಿ ಮಳೆಗೆ ಹಾರಿಹೋಗಿರುವುದು.
Published on

ಸರಗೂರು: ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಗ್ರಾಮದ ಮಹೇಶ್ ಎಂಬುವರ ಮನೆಯ ಗೋಡೆ ಇತ್ತೀಚೆಗೆ ಸುರಿದ ಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿವೆ.

ಗ್ರಾಪಂ ಕಚೇರಿ ಛಾವಣಿಯ ಕಲ್ನಾರ್ ಶೀಟುಗಳು, ಕಬ್ಬಿಣ ಪೈಪ್‌ಗಳ ಸಮೇತ ಬುಡ ಮೇಲಾಗಿ ರಸ್ತೆಗೆ ಅಪ್ಪಳಿಸಿದೆ. ಇಲ್ಲಿನ ಪೀಠೋಪಕರಣ, ಕಂಪ್ಯೂಟರ್, ಲ್ಯಾಪ್‌ಟಾಪ್, ಯುಪಿಎಸ್, ಜೆರಾಕ್ಸ್, ವಿದ್ಯುತ್ ಸಲಕರಣೆಗಳು ಇನ್ನಿತರ ಕೆಲ ದಾಖಲಾತಿಗಳು ಹಾಳಾಗಿವೆ.

ಗ್ರಾಮದ ಮಹೇಶ್, ಹನುಮಂತಯ್ಯ ಹಾಗೂ ಮಹದೇವಮ್ಮ ಅವರ ಮನೆಯ ಗೋಡೆ ಹಾಗೂ ಛಾವಣಿ ಬಿರುಗಾಳಿಗೆ ಕುಸಿದು ಬಿದ್ದಿದ್ದು, ಸಂತ್ರಸ್ತರ ಬದುಕು ಅತಂತ್ರವಾಗಿದೆ. ಕಂದಾಯ ಇಲಾಖೆ ಅಧಿಕಾರಿ ಮುಜೀಬ್ ಸ್ಥಳಕ್ಕೆ ಆಗಮಿಸಿ ಹಾನಿಗೀಡಾದ ಮನೆ ಮತ್ತು ಜಮೀನನ್ನು ಪರಿಶೀಲನೆ ನಡೆಸಿದರು. ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ದೊರಕಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net