ಹಂಚೀಪುರ ಗ್ರಾಪಂ ಅಧ್ಯಕ್ಷರಾಗಿ ರುಕ್ಮಿಣಿ ಆಯ್ಕೆ

07 SARAG 1
ಸರಗೂರು ತಾಲೂಕಿನ ಹಂಚೀಪುರ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಪುಟ್ಟಯ್ಯ ಮತ್ತು ಉಪಾಧ್ಯಕ್ಷ ಎಂ ನಟರಾಜು ಅವರನ್ನು ಮುಖಂಡರು ಸನ್ಮಾನಿಸಿದರು. ಎಸ್.ಎಸ್.ಜಯರಾಜ್, ಎಂ.ಎಸ್.ಮಂಜುಳಾ, ಮಣಿ, ಗೀತಾ ಇತರರು ಇದ್ದರು.
Published on

ಮೈಸೂರು: ಸರಗೂರು ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರುಕ್ಮಿಣಿ ಪುಟ್ಟಯ್ಯ, ಉಪಾಧ್ಯಕ್ಷರಾಗಿ ಎಂ.ನಟರಾಜು ಆಯ್ಕೆಯಾದರು.

13 ಸದಸ್ಯರ ಬಲದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರುಕ್ಮಿಣಿ ಪುಟ್ಟಯ್ಯ, ಶಿವಮ್ಮನಾಗಯ್ಯ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷರ ಸ್ಥಾನಕ್ಕೆ ನಟರಾಜು, ಚಂದ್ರಶೆಖರ್ ನಾಮಪತ್ರ ಸಲ್ಲಿಸಿದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರುಕ್ಮಿಣಿ ಪುಟ್ಟಯ್ಯ 7 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಶಿವಮ್ಮ ನಾಗಯ್ಯ 6 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಂ.ನಟರಾಜು 7 ಮತಗಳನ್ನು ಪಡೆದು ಜಯ ಗಳಿಸಿದರು. ಚಂದ್ರಶೇಖರ್ 6 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಚುನಾವಣಾಧಿಕಾರಿಯಾಗಿ ಜನಾರ್ದನ್ ಕಾರ್ಯನಿರ್ವಹಿಸಿದರು.

ಸದಸ್ಯರಾದ ಎಸ್.ಎಸ್.ಜಯರಾಜ್, ಎಂ.ಎಸ್.ಮಂಜುಳಾ, ಮಣಿ ನಾಗರಾಜು, ಮಂಜುಳಾ ಬಸವಣ್ಣ, ಗೀತಾ ದೇವರಾಜುಸ್ವಾಮಿ, ಪಿಡಿಒ ಚನ್ನಪ್ಪ, ಸಿಬ್ಬಂದಿ ಜಗದೀಶ್, ತಾಪಂ ಸದಸ್ಯ ಮಹದೇವಸ್ವಾಮಿ, ಪ್ರಕಾಶ್, ಬಸವಣ್ಣ, ಶಿವರಾಜು, ಚಂದ್ರಶೇಖರಯ್ಯ, ಡಿ.ಸಿ.ಸಿದ್ದಪ್ಪ, ಮಹದೇವಪ್ಪ, ಪುಟ್ಟಯ್ಯ, ಮಾದಪ್ಪ, ಚಿನ್ನಯ್ಯ, ಶ್ರೀನಿವಾಸ, ಕೆಂಪಯ್ಯ, ಚೆನ್ನಯ್ಯ, ಹುರ ಜ್ಯೋತಿ ಪ್ರಕಾಶ್, ಮಸಹಳ್ಳಿ ಬಸವರಾಜು, ವಣಕಾರಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net