ಹಂಗಿಲ್ಲದ ಸರ್ಕಾರ ನಡೆಸುವೆ: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ

2
Published on

ಕುಣಿಗಲ್​ ಯಾವ ಪಕ್ಷದ ಹಂಗಿಲ್ಲದೆ ಜೆಡಿಎಸ್​ ಅಧಿಕಾರ ನಡೆಸಲು ಸಂಪೂರ್ಣ ಬಹುಮತ ನೀಡಿ. ರಾಜ್ಯದ ಪ್ರತಿಯೊಬ್ಬ ರೈತನ ಜಮೀನಿಗೂ ನೀರು ಹರಿಯುವಂತೆ ಮಾಡುತ್ತೇನೆ, ಇಲ್ಲವಾದರೆ ಜೆಡಿಎಸ್​ ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಜಿಕೆಬಿಎಂಎಸ್​ ಶಾಲಾ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥ ಯಾತ್ರೆಯಲ್ಲಿ ಮಾತನಾಡಿದರು.

ಮಾಜಿ ಪ್ರಧಾನಿ ದೇವೇಗೌಡ ಅವರ ಅನುಭವದ ಮಾರ್ಗದರ್ಶನದಲ್ಲಿ ರಾಜ್ಯದ ನದಿಗಳ ನೀರನ್ನು ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ರೈತರ ಬದುಕನ್ನು ಹಸನು ಮಾಡಬೇಕೆಂದು ಪಣತೊಟ್ಟಿದ್ದೇನೆ ಎಂದು ತಿಳಿಸಿದರು.

ವಿಧಾನಸಭೆ ಚುನಾವಣೆ ಇನ್ನೊಂದು ವರ್ಷ ಬಾಕಿ ಇದೆ. ಚುನಾವಣೆ ೂಷಣೆಯಾದ ಮೇಲೆ ಪ್ರಣಾಳಿಕೆ ಬಿಡುಗಡೆ ಮಾಡುವುದಿಲ್ಲ, ಎರಡು ವಾರದಲ್ಲಿ ಜೆಡಿಎಸ್​ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಪ್ರತಿ ಮನೆಗೂ ಪ್ರಣಾಳಿಕೆ ತಲುಪಲಿದೆ. ಎಲ್ಲರೂ ಒದಿ ಪ್ರಣಾಳಿಕೆಯಲ್ಲಿ ಇರುವ ಯೋಜನೆಗಳನ್ನು ಕುಮಾರಸ್ವಾಮಿ ಜಾರಿ ಮಾಡುವ ನಂಬಿಕೆ ಇದ್ದರೆ ಜೆಡಿಎಸ್​ಗೆ ಮತ ನೀಡಿ ಎಂದು ಮನವಿ ಮಾಡಿದರು.

ಜಿಲ್ಲೆಯ ಜನತೆಗೆ ದ್ರೋಹ ಮಾಡಿಲ್ಲ: ತುಮಕೂರು ಜಿಲ್ಲೆಗೂ ಹೇಮಾವತಿ ನೀರು ಹರಿದು ಬರಲು ದೇವೇಗೌಡರೇ ಕಾರಣ. ದೇವೇಗೌಡರು ಹೋರಾಟ ಮಾಡದಿದ್ದರೆ ಹೇಮಾವತಿ ಜಲಾಶಯ ನಿರ್ಮಾಣವೇ ಆಗುತ್ತಿರಲಿಲ್ಲ. ಆದರೆ ಕೆಲವು ಪಕ್ಷದ ಮುಖಂಡರು ತುಮಕೂರಿಗೆ ಹೇಮಾವತಿ ನೀರು ಹರಿಯಲು ದೇವೇಗೌಡರು ಅಡ್ಡಿಪಡಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ದೇವೇಗೌಡ ಕುಟುಂಬ ಇರುವವರೆಗೂ ತುಮಕೂರು ಜಿಲ್ಲೆಯ ಋಣ ತೀರಿಸಲು ಸಾಧ್ಯವಿಲ್ಲ, ಜಿಲ್ಲೆಯ ಜನ ದೇವಗೌಡ ಅವರ ಕುಟುಂಬಕ್ಕೆ ಯಾವುದೇ ಮೋಸ ಮಾಡಿಲ್ಲ, ಅದೇ ರೀತಿ ದೇವೇಗೌಡ ಅವರ ಕುಟುಂಬವೂ ಜನತೆಗೆ ದ್ರೋಹ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

65 ಪರ್ಸೆಂಟ್​ ಸರ್ಕಾರ: ರಾಜ್ಯದಲ್ಲಿ 40 ಪರ್ಸೆಂಟ್​ ಸರ್ಕಾರವಲ್ಲ 65 ಪರ್ಸೆಂಟ್​ ಸರ್ಕಾರವಾಗಿದೆ. ಯೋಜನೆಗಳ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಸರ್ಕಾರ ಲೂಟಿ ಮಾಡುತ್ತಿದೆ. ವಿಧಾನಸೌಧದಿಂದ ಕೆಳ ಹಂತದವರೆಗೂ ಭ್ರಷ್ಟಚಾರ ತುಂಬಿತುಳುಕುತ್ತಿದೆ. ಸರ್ಕಾರದಲ್ಲಿ ಇದಕ್ಕೆ ಅವಕಾಶ ನೀಡಿರಲಿಲ್ಲ. 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವ ಬದಲು ವಿವಿಧ ಯೋಜನೆಗಳಿಗೆ 25 ಸಾವಿರ ಹಣ ಬಿಡುಗಡೆ ಮಾಡಿದ್ದರೆ ನನಗೂ 10 ಸಾವಿರ ಕೋಟಿ ಪರ್ಸೆಂಟೇಜ್​ ಬರುತ್ತಿತ್ತು ಅದೇ ಹಣದಲ್ಲಿ ಚುನಾವಣೆ ಮಾಡಬಹುದಿತ್ತು ಎಂದು ಪ್ರಶ್ನಿಸಿದ ಅವರು ಜೆಡಿಎಸ್​ ಹಣ ಮಾಡುವ ಪಕ್ಷವಲ್ಲ, ಜನರ ಹಿತ ಕಾಯುವ ಪಕ್ಷ ಎಂದು ಕುಮಾರಸ್ವಾಮಿ ತಿಳಿಸಿದರು.

ದಾಖಲೆ ಇದ್ದರೆ ಆರೋಪ ಮಾಡಬೇಕು: ಕಾಂಗ್ರೆಸ್​ನ ದಿನೇಶ್​ ಗುಂಡೂರಾವ್​ ಅವರು ಪಿಎಸ್​ಐ ಪರೀೆ ಹಗರಣದಲ್ಲಿ ಗೃಹ ಸಚಿವರ ಪಾತ್ರ ಇದೆ ಎಂದು ಆರೋಪ ಮಾಡಿದ್ದಾರೆ. ಆದರೆ ದಾಖಲೆ ಇದ್ದರೆ ಬಿಡುಗಡೆ ಮಾಡಿ ಆರೋಪ ಮಾಡಬೇಕು. ಇಲ್ಲಿ ಭ್ರಷ್ಟಚಾರ ನಡೆದಿರುವುದು ಸತ್ಯ, ಎಲ್ಲವೂ ತನಿಖೆಯಿಂದ ಬಯಲಾಗಬೇಕಾಗಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ಮುಖಂಡರು ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ತಂದೆಯನ್ನು ಗೆಲ್ಲಿಸಿಕೊಂಡು ಬನ್ನಿ: ಡಿ.ನಾಗರಾಜಯ್ಯ ಅವರ ಕೊನೆಯ ಚುನಾವಣೆ ಇದಾಗಿದೆ. ತಾಲೂಕಿನಲ್ಲಿ ಜೆಡಿಎಸ್​ ಅಧ್ಯಕ್ಷ ಜಗದೀಶ್​ ಡಿ.ನಾಗರಾಜಯ್ಯ ಹಾಗೂ ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ಡಿ.ನಾಗರಾಜಯ್ಯ ಇಬ್ಬರು ಲವ&ಕುಶರಂತೆ ಜನರ ಪ್ರೀತಿ ವಿಶ್ವಾಸ ಗಳಿಸಿ ತಂದೆ ಡಿ.ನಾಗರಾಜಯ್ಯ ಅವರನ್ನು ಗೆಲ್ಲಿಸಿಕೊಂಡು ಬನ್ನಿ, ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಕಿವಿಮಾತು ಹೇಳಿದರು.

ಕುಣಿಗಲ್​ನಲ್ಲಿ ಅದ್ದೂರಿ ಸ್ವಾಗತ: ಜನತಾ ಜಲಧಾರೆ ರಥ ಯಾತ್ರೆಗೆ ತಾಲೂಕಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಮಹಿಳೆಯರು ತಾಲೂಕಿನ ವಿವಿಧ ಕೆರೆ ಹಾಗೂ ಜಲಾಶಯಗಳಿಂದ ಕಳಶದಲ್ಲಿ ನೀರು ತುಂಬಿಸಿಕೊಂಡು ಪೂರ್ಣ ಕುಂಬದ ಮೂಲಕ ರಥಕ್ಕೆ ಸ್ವಾಗತ ನೀಡಿದರು. ನಿಖಿಲ್​ ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವಿಧಾನ ಪರಿಷತ್​ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕರಾದ ಸುಧಾಕರಲಾಲ್​, ಎಂ.ಟಿ.ಕೃಷ್ಣಪ್ಪ, ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಆಂಜನಪ್ಪ, ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ಡಿ.ನಾಗರಾಜಯ್ಯ, ತಾಲೂಕು ಜೆಡಿಎಸ್​ ಅಧ್ಯಕ್ಷ ಬಿ.ಎನ್​.ಜಗದೀಶ್​, ಮಾಜಿ ಅಧ್ಯಕ್ಷ ಕೆ.ಎಲ್​.ಹರೀಶ್​, ಮುಖಂಡರಾದ ಬಾಂಬೆ ಶಿವಣ್ಣ, ತಮ್ಮಣ್ಣ, ವರದರಾಜು, ಹರೀಶ್​ ನಾಯ್ಕ್​, ತರೀಕೆರೆ ಪ್ರಕಾಶ್​ ಮುಂತಾದವರು ಹಾಜರಿದ್ದರು.

ಮತ ಬ್ಯಾಂಕಿಗಾಗಿ ಹಿಜಾಬ್​ ಬಗ್ಗೆ ಕಾಂಗ್ರೆಸ್​ ಪ್ರಸ್ತಾಪ ಮಾಡುತ್ತಿಲ್ಲ, ಆದರೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಮಾತ್ರ ವಾಸ್ತವಾಂಶದ ಬಗ್ಗೆ ಎಲ್ಲ ವಿಚಾರದಲ್ಲಿಯೂ ಧ್ವನಿ ಎತ್ತಿದ್ದಾರೆ. 2023ರ ಚುನಾವಣೆಯಲ್ಲಿ ಕುಮಾರಣ್ಣ ಅವರ ಕೈ ಬಲಪಡಿಸಿಆದರೆ ಬೇರೆಯವರ ಜತೆ ಕೈ ಜೊಡಿಸುವ ಅನಿವಾರ್ಯತೆ ತಂದಿಡಬೇಡಿ. > ನಿಖಿಲ್​ ಕುಮಾರಸ್ವಾಮಿ, ಜೆಡಿಎಸ್​ ರಾಜ್ಯ ಯುವ ಟಕದ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net