

ಕಾರವಾರ: ಜಿಲ್ಲೆಯ ಹಂಗಾಮಿ ಲಾಗಣಿದಾರರ ಹಕ್ಕನ್ನು ಶೀಘ್ರ ಕಾಯಂ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಿದ 74ನೇ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಧ್ವಜ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
1978 ರ ಪೂರ್ವದಲ್ಲಿ ಅರಣ್ಯ ಅತಿಕ್ರಮಣ ಮಾಡಿಕೊಂಡು ಕೃಷಿ ಮಾಡಿದವರ ಭೂಮಿ ಸಕ್ರಮ ಮಾಡುವ ಗುರಿ ಇದೆ. ನೆರೆ ಪರಿಹಾರ ನೀಡಲು ಜಿಲ್ಲಾಧಿಕಾರಿ ಖಾತೆಯಲ್ಲಿ 32 ಕೋಟಿ ರೂ. ಇದೆ ಎಂದರು. ವಿವಿಧ ಕಾಮಗಾರಿಗಳ ವಿವರ ನೀಡಿದರು.
ಸೀಮಿತ ಕಾರ್ಯಕ್ರಮ: ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಸ್ವಾತಂತ್ರ್ಯೊತ್ಸವ ಆಯೋಜಿಸಲಾಗಿತ್ತು. ಸಚಿನ್ ಲಾರೆನ್ಸ್ ನೇತೃತ್ವದ ಪರೇಡ್ನಲ್ಲಿ ಪೊಲೀಸ್, ಅರಣ್ಯ ಹಾಗೂ ಗೃಹರಕ್ಷಕ ತುಕಡಿಗಳು ಮಾತ್ರ ಭಾಗವಹಿಸಿದ್ದವು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ. ಶಾಸಕಿ ರೂಪಾಲಿ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಎಸ್ಪಿ ಶಿವ ಪ್ರಕಾಶ ದೇವರಾಜು, ಎಡಿಸಿ ಕೃಷ್ಣಮೂರ್ತಿ ಎಚ್.ಕೆ., ಎಸಿ ಪ್ರಿಯಾಂಗಾ ಎಂ.ಇದ್ದರು.
ಸನ್ಮಾನ: ಕರೊನಾ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಡಿಎಚ್ಒ ಡಾ.ಶರದ್ ನಾಯಕ, ಡಾ.ಶಿವಾನಂದ ಕುಡ್ತಲಕರ್, ತಹಸೀಲ್ದಾರ್ ಆರ್.ವಿ.ಕಟ್ಟಿ, ಆಶಾ ಕಾರ್ಯಕರ್ತೆ ದೀಪಾಲಿ ಪೈಂಗಣಕರ್, ದಾದಿ ಸುಮಿತ್ರಾ ಆರ್. ನಾಯ್ಕ, ಆರ್ಐ ಶ್ರೀಧರ ನಾಯ್ಕ, ಕಿರವತ್ತಿ ಪಿಡಿಒ ರಮೇಶ ತಿಮ್ಮಾರೆಡ್ಡಿ, ಸರೋಜಿನಿ ಗುನಗಾ, ಪೌರ ಕಾರ್ವಿುಕರಾದ ಭಟ್ಕಳದ ಮಹಾದೇವ ಕೊರಾರ, ಅಂಕೋಲಾದ ಚಂದ್ರ ಹರಿಜನ, ಪೊಲೀಸ್ ಸಿಬ್ಬಂದಿ ಭಟ್ಕಳದ ನಾರಾಯಣ ನಾಯ್ಕ, ಡಿಎಆರ್ ಎಆರ್ಎಸ್ಐ ಕೃಷ್ಣಾನಂದ ಸಾಳುಂಕೆ, ಕರ್ತವ್ಯದಲ್ಲಿದ್ದಾಗ ಕರೊನಾ ಸೋಂಕಿಗೆ ತುತ್ತಾಗಿ ಗುಣ ಹೊಂದಿದ ಕ್ರಿಮ್್ಸ ನರ್ಸ್ಗಳಾದ ಶ್ರೀಜಲ್, ವಿನಯಾ, ವೈದ್ಯಕೀಯ ಸಿಬ್ಬಂದಿ ವಿನಾಯಕ, ರಾಮನಾಥ ಹಾಗೂ ಪ್ರಸಾದ ಅವರನ್ನು ಸನ್ಮಾನಿಸಲಾಯಿತು. ಅಪಘಾತ ರಹಿತ ಚಾಲನೆ ಮಾಡಿದ ಎಫ್.ಎ. ಶೇಖ್, ಬಿ.ಬಿ. ಹಿರೇಮಠ, ಆರ್.ಜಿ.ಪಡತಿ, ಆರ್.ಜಿ.ಭಂಡಾರಕರ್, ಪಿ.ಎಸ್.ನಾಯ್ಕ, ಜಿ.ಕೆ.ನಾಯ್ಕ, ಪಿ.ಜೆ.ಭಟ್, ಎಸ್.ವಿ. ಬಂಕೊಳ್ಳಿ, ಜಿ.ಡಿ.ಬೋರಕರ್, ಯು.ವಿ.ನಾಯ್ಕ, ಟಿ.ಎಲ್. ನಾಯ್ಕ , ಈಶ್ವರ ಜಿ. ನಾಯ್ಕ ಅವರಿಗೆ ಪದಕ ನೀಡಿ ಗೌರವಿಸಲಾಯಿತು.