ಹಂಗಳದಲ್ಲಿ ವಿಜಯೇಂದ್ರ ಜನ್ಮದಿನ

06-GPT-2
Published on

ಗುಂಡ್ಲುಪೇಟೆ: ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಜನ್ಮದಿನದ ಅಂಗವಾಗಿ ತಾಲೂಕಿನ ಹಂಗಳ ಗ್ರಾಮದಲ್ಲಿ ಕಾರ್ಯಕರ್ತರು ಮಂಗಳವಾರ ಸ್ವಚ್ಛತಾ ಅಭಿಯಾನ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಸಿದರು.

ಶುಭಾಶಯ ಕೋರಲು ಬೆಂಗಳೂರಿಗೆ ಬರುವ ಬದಲು ನೀವು ಇರುವ ಸ್ಥಳಗಳಲ್ಲೇ ಪರಿಸರವನ್ನ ಸ್ವಚ್ಛ ಮಾಡುವುದರ ಮೂಲಕ ಅಥವಾ ಸಸಿ ನೆಡುವ ಮೂಲಕ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುವ ಮೂಲಕ ಅಲ್ಲಿಂದಲೇ ನನಗೆ ಶುಭಾಷಯ ಕೋರುವಂತೆ ವಿಜಯೇಂದ್ರ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಹಂಗಳ ಗ್ರಾಮದ ಕೆರೆಯ ಬಳಿ ಇರುವ ಮಹದೇಶ್ವರ ಸ್ವಾಮಿಯ ದೇವಸ್ಥಾನದ ಮುಂಭಾಗ 50ಸಸಿ ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಿದರು. ಬಿಜೆಪಿ ರಾಜ್ಯ ಸಂಚಾಲಕ ಪ್ರಣಯ್, ಬಸವೇಶ್, ಸಿದ್ದರಾಜಪ್ಪ, ರಮೇಶ್, ರಾಮು, ನಾಗಮಲ್ಲಪ್ಪ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net