

ಚಿತ್ರದುರ್ಗ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ,ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಸ್ವೀಪ್ ಕಮಿಟಿಯಿಂದ ನಗರ ದ ಗಾರೆ ಹಟ್ಟಿ ಬೃಹನ್ಮಠ ಪ್ರೌಢಶಾಲೆಯಲ್ಲಿ ಮಂಗಳವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಭಿತ್ತಿಪತ್ರ ರಚನೆ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳ ವಿಜೇತರು ರಾಜ್ಯಮಟ್ಟದ ಸ್ವೀಪ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಭಿತ್ತಿಪತ್ರ ರಚನೆ: ಹೊಳಲ್ಕೆರೆ ಎಂ.ಎಂ.ಸರ್ಕಾರಿ ಪ್ರೌಢಶಾಲೆ ಎಚ್.ಜೆ. ಸ್ಪೂರ್ತಿ(ಪ್ರ), ಚಿತ್ರದುರ್ಗ ತಾಲೂಕು ತುರುವನೂರು ಸ ರ್ಕಾರಿ ಪಪೂ ಕಾಲೇಜಿನ ಡಿ.ಎ.ಯಶವಂತ್(ದ್ವಿ), ಚಳ್ಳಕೆರೆ ವಾಸವಿ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿ ರೀತಿಶ್‌ದೊರೆ(ತೃ)ಸ್ಥಾನ ಪಡೆ ದರು.
ಪ್ರಬಂಧ(ಕನ್ನಡ):ಚಳ್ಳಕೆರೆ ತಾಲೂಕು ತಳಕು ಸರ್ಕಾರಿ ಪಪೂ ಕಾಲೇಜಿನ ಸಿ.ಸ್ನೇಹಾ(ಪ್ರ),ಮೊಳಕಾಲ್ಮೂರು ತಾಲೂಕು ಸರ್ಕಾರಿ ಬಾ ಲಕಿಯರ ಪ್ರೌಢಶಾಲೆ ನೇತ್ರಾವತಿ(ದ್ವಿ), ಹೊಳಲ್ಕೆರೆ ತಾಲೂಕು ಎಚ್‌ಡಿ ಕಣಿವೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎ.ಗೀತಾ(ತೃ).
ಪ್ರಬಂಧ(ಇಂಗ್ಲೀಷ್):ಚಿತ್ರದುರ್ಗ ತಾಲೂಕು ಕುರುಬರಹಳ್ಳಿ ಸರ್ಕಾರಿ ಪ್ರೌಢಶಾಲೆ ಆಲಿಯ ಪರ್ವಿನ್(ಪ್ರ),ಚಳ್ಳಕೆರೆ ತಾಲೂಕು ತಳಕು ಎಚ್‌ಟಿಟಿ ಸರ್ಕಾರಿ ಪ್ರೌಢಶಾಲೆಯ ಎಸ್.ಎಂ.ಸಂಜನಾ(ದ್ವಿ), ಹಿರಿಯೂರು ತಾಲೂಕು ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಟಿ.ಜ್ಞಾನೇಶ್ವರಿ(ತೃ).
ರಸಪ್ರಶ್ನೆ: ಹಿರಿಯೂರು ತಾಲೂಕು ಮರಡಿಹಳ್ಳಿ ಕೆಪಿಎಸ್‌ನ ಎಚ್.ಮಮತಾ, ಸಿ.ಪ್ರಿಯಾ(ಪ್ರ), ಹೊಸದುರ್ಗ ತಾಲೂಕು ದೇವಪು ರದ ಜಿಎಚ್‌ಎಸ್ ಶಾಲೆಯ ಆರ್.ಚಂದನಾ, ಎಸ್.ಅಮೂಲ್ಯ(ದ್ವಿ), ಹೊಳಲ್ಕೆರೆ ಎಂಎಂ ಸರ್ಕಾರಿ ಪ್ರೌಢಶಾಲೆಯ ಕೆ.ಬಿ.ಕೀರ್ತನಾ, ಡಿ. ಎಂ.ಪಲ್ಲವಿ(ತೃ) ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಈ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.
ಸ್ಪರ್ಧೆ ಉದ್ಘಾಟಿಸಿದ ಡಿಡಿಪಿಐ ಕೆ.ರವಿಶಂಕರರೆಡ್ಡಿ ಅವರು ಮಾತನಾಡಿ, ಮತದಾರರ ಪಟ್ಟಿಗೆ ಹೆಸರು ಸೇರಿಸಿ, ಗುರುತಿನ ಚೀಟಿ ಪಡೆ ಯುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದರು.
ಚುನಾವಣೆ ಕುರಿತಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸ್ಪೀಪ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಬಿಇಒ ಎಸ್.ನಾಗಭೂಷಣ್ ಹೇಳಿದರು. ವಿಷಯ ಪರಿವೀಕ್ಷಕ ಚಂದ್ರಣ್ಣ, ಸ್ಪೀಪ್‌ಸ್ಪರ್ಧೆ ನೋಡಲ್‌ಅಧಿಕಾರಿ ಸುಷ್ಮಾ, ಬೃಹನ್ಮಠ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ನಾಗನಾಯ್ಕ ಹಾಗೂ ಇಂಗ್ಲೀಷ್ ಶಿಕ್ಷಕ ಸಿದ್ದೇಶ್ ಮತ್ತಿತರರು ಇದ್ದರು.