ಸ್ವಿಫ್ಟ್ ಕಾರಿನಲ್ಲಿತ್ತು 33 ಸಾವಿರ ರೂ. ಗೋವಾ ಮದ್ಯ!

IMG-20220725-WA0033.jpg
Published on

ಕಾರವಾರ: ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 3.13 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಮಂಗಳೂರಿನ ಅಬಕಾರಿ ವಿಶೇಷ ದಳದ ಅಧಿಕಾರಿಗಳು ಕಾರವಾರ ಮಾಜಾಳಿ ತನಿಖಾ ಠಾಣೆಯಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ.

33.840 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದ್ದು, ಆನಂದ ಜಾಧವ ಹಾಗೂ ರಾಜನ್ ಕೋಯರ ಪಾಟೀಲ ಎಂಬುವವರನ್ನು ಬಂಧಿಸಲಾಗಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ನಾಗರಾಜಪ್ಪ, ಉಪ ಆಯುಕ್ತೆ ವನಜಾಕ್ಷಿ ಎಂ.ನಿರ್ದೇಶನದಂತೆಣ ಉಪ ಅಧೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪರಿಶೀಲನೆ ನಡೆಸಲಾಗಿತ್ತು.ಅನಕಾರಿ ಸಬ್ ಇನ್ಸ್ಪೆಕ್ಟರ್  ಪಿ.ಕೆ.ಹಳದನಕರ ಪ್ರಕರಣ ದಾಖಲಿಸಿದ್ದಾರೆ.

ಅಧಿಕಾರಿಗಳಾದ
ಉಷಾ ಯಂಡಿಗೇರಿ, ಬಸವರಾಜ, ದಯಾನಂದ, ಸಿಬ್ಬಂದಿ, ಶ್ರೀಧರ ಚೌಗಲೆ , ಎಂ.ಕೆ. ನಾಯ್ಕ ಪರಿಶೀಲನೆ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net