ಸ್ವಾಸ್ಥ್ಯ ಸಮಾಜಕ್ಕೆ ಬೇಕು ಪೌಷ್ಟಿಕ, ನೈರ್ಮಲ್ಯ ಜ್ಞಾನ

oplus_1024
oplus_1024
Published on

ಚಿತ್ರದುರ್ಗ: ಆಹಾರ ಪೌಷ್ಟಿಕತೆ, ನೈರ್ಮಲ್ಯ ಜ್ಞಾನವನ್ನರಿತರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಹೇಳಿದರು.

ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ ಮತ್ತು ಚಿಕ್ಕಬೆನ್ನೂರು ಗ್ರಾಪಂ ಸಹಯೋಗದೊಂದಿಗೆ ಚಿತ್ರದುರ್ಗ ತಾಲೂಕಿನ ವಿಜಾಪುರದ ಹನುಮಂತ ದೇವಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ಪೌಷ್ಟಿಕ, ನೈರ್ಮಲ್ಯ ಸಭೆಯಲ್ಲಿ ಮಾತನಾಡಿ, ಗರ್ಭಿಣಿ, ಬಾಣಂತಿ, ಮಕ್ಕಳು ಮತ್ತು ವಯೋವೃದ್ಧರಲ್ಲಿ ಕಂಡು ಬರುವ ರಕ್ತ ಹೀನತೆ ಸರಿದೂಗಿಸಲು ನುಗ್ಗೆ ಸೊಪ್ಪು, ಬಸಲೆ, ಗೋಣಿ ದಂಟಿನ ಸೊಪ್ಪು, ಪಾಲಕ ಸೊಪ್ಪು ಹೇರಳವಾಗಿ ಬಳಸ ಬೇಕು. ಮನೆಗಳ ಮುಂದೆ ಕೈ ತೋಟ ಮಾಡಿಕೊಂಡು ಅಗತ್ಯ ತರಕಾರಿಗಳನ್ನು ಬೆಳೆದರೆ ಆರ್ಥಿಕ ಹೊರೆಯೂ ಕಡಿಮೆ ಆಗುತ್ತದೆ ಎಂದರು. ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶೋಭಾ, ಸಂಪನ್ಮೂಲ ವ್ಯಕ್ತಿ ಆಶಾ, ಆಶಾ ಕಾರ್ಯಕರ್ತೆ ಮಮತಾ, ಗ್ರಾಮದ ಮುಖಂಡರಾದ ಕೆ. ದ್ಯಾಮಪ್ಪ, ತಿಪ್ಪೇಸ್ವಾಮಿ, ನಾಗರಾಜು ಇತರರು ಇದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net