ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ

1Huk2
Published on

ಹುಕ್ಕೇರಿ: ಸರ್ಕಾರಿ ನೌಕರಿಗಾಗಿ ಹಾತೊರೆಯುವುದಕ್ಕಿಂತ ಸ್ವಂತ ಉದ್ಯೋಗದಿಂದ ಸ್ವಾವಲಂಬಿಯಾಗಿ ಬದುಕಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಪ್ರಯೋಜನ ಪಡೆದುಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾಗಿರುವ ಸಂತ್ರಾಮ ಅವರಿಗೆ ಅಭಿನಂದಿಸುತ್ತೇನೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.

ಕೋಣನಕೇರಿ ಗ್ರಾಮದ ಸಂತ್ರಾಮ ಐಹೊಳೆ ಅವರಿಗೆ ೨೦೨೩-೨೪ನೇ ಸಾಲಿನಲ್ಲಿ ಅಂಬೇಡ್ಕರ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಸಾರಥಿ ಯೋಜನೆ ಅಡಿಯಲ್ಲಿ ಮಂಜೂರಾದ ವಾಹನ ಶನಿವಾರ ಹಸ್ತಾಂತರಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಮತ್ತು ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳಿಂದ ಸಾಲ ಸೌಲಭ್ಯ ಒದಗಿಸುತ್ತಿದ್ದಾರೆ. ಸಬ್ಸಿಡಿ ಜತೆಗೆ ಕಡಿಮೆ ಬಡ್ಡಿ ದರದಲ್ಲಿ ದೊರಕುವ ಸಾಲ ಪಡೆದು ಹಲವಾರು ಉದ್ಯೋಗ ಕೈಗೊಳ್ಳುವ ಅವಕಾಶವಿದೆ. ಮಹಿಳೆಯರು ಇಂತಹ ಯೋಜನೆಗಳ ಉಪಯೋಗ ಪಡೆದು ಗೃಹ ಉತ್ಪನ್ನ ಉತ್ಪಾದಿಸಿ ಬದುಕು ಕಟ್ಟಿಕೊಂಡಿದ್ದಾರೆ. ಇಂತಹವರ ಜೀವನ ಯುವ ಜನರಿಗೆ ಮಾದರಿಯಾಗಲಿ ಎಂದರು.

ಬಡಕುಂದ್ರಿ ಪಿಕೆಪಿಎಸ್ ಅಧ್ಯಕ್ಷ ಸಿದ್ದು ಮಾನಗಾಂವಿ, ವಿರೂಪಾಕ್ಷಿ ನಿಪ್ಪಾಣಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಲ್.ಪೂಜೇರಿ, ಯಲ್ಲಪ್ಪ ಪಟಗುಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net