ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ

11Huk1
Published on

ಹುಕ್ಕೇರಿ: ಮಹಿಳೆಯರು ಕುಟುಂಬ ನಿರ್ವಹಣೆ ಜತೆಗೆ ಸ್ವಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಮಹಿಳಾ ಕಲ್ಯಾಣ ಸಂಸ್ಥೆ ಸಂಯೋಜಕ ಎಂ.ಎಸ್.ಚೌಗಲಾ ಹೇಳಿದರು.

ತಾಲೂಕಿನ ಹಿಡಕಲ್ ಡ್ಯಾಂನ ಮಹಿಳಾ ಕಲ್ಯಾಣ ಸಂಸ್ಥೆ ಶಕ್ತಿ ಸದನ ಕೇಂದ್ರದಲ್ಲಿ ಬೆಂಗಳೂರಿನ ಎಫ್ ವಿಟಿಆರ್‌ಎಸ್ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವ-ಉದ್ಯೋಗ ತರಬೇತಿ ಪಡೆದ ಲಾನುಭವಿಗಳ ಟೇಲರಿಂಗ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಸಂವಹನ, ಗ್ರಾಹಕರ ಸಂಪರ್ಕ ಹಾಗೂ ಸಮಯ ನಿರ್ವಹಣೆ ಸೇರಿ ಇತ್ಯಾದಿ ಗುಣಗಳನ್ನು ಅಳವಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.

ಹಿಡಕಲ್ ಡ್ಯಾಂ ಮತ್ತು ಸಿಂಧಿಹಟ್ಟಿ ಗ್ರಾಮಗಳ 30ಕ್ಕೂ ಅಧಿಕ ಲಾನುಭವಿಗಳಿಗೆ ಉಚಿತ ಹೊಲಿಗೆ ಪರಿಕರ ವಿತರಿಸಲಾಯಿತು.

ತರಬೇತುದಾರರಾದ ಸುರೇಖಾ ಪಾಟೀಲ, ಬಸವರಾಜ ಮಣ್ಣಿಕೇರಿ, ಮಂದಾಕಿನಿ ಹಟ್ಟಿ, ಪ್ರಾಚಾರ್ಯ ಕಿರಣ ಚೌಗಲಾ, ಶಾಹೀನ್ ಹೊಂಬಾಳ ಇತರರಿದ್ದರು. ರೇಡಿಯೋ ಕೇಂದ್ರದ ಮೀರಾ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net