

ಚಿಂಚೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯೂ ಯಾವುದೇ ತಾರತಮ್ಯವಿಲ್ಲದೆ ಎಲ್ಲ ಸಮುದಾಯದ ಏಳಿಗೆಗೆ ಶ್ರಮಿಸುತ್ತಿದೆ ಎಂದು ಪುರಸಭೆ ಅಧ್ಯಕ್ಷ ಆನಂದ ಟೈಗರ್ ಹೇಳಿದರು.
ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿAದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಜ್ಞಾನ ವಿಕಾಸ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಷ್ಟದಲ್ಲಿರುವವರನ್ನು ಮೇಲೆತ್ತುವ ಕಾರ್ಯ ಸಂಸ್ಥೆ ಮಾಡುತ್ತಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ಅಲ್ಲದೆ ಸಾಲ ಸೌಲಭ್ಯ, ಶಿಕ್ಷಣಕ್ಕೆ ನೆರವು, ವಯೋ ವೃದ್ಧರಿಗೆ ಮಾಸಾಶನ, ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ನೆರವು ಸೇರಿ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಮಾತೃ ಮಂದಿರ ಶಾಲೆ ಮುಖ್ಯಗುರು ನಾಗಪ್ಪ ಮೈಲ್ವಾರ, ತಾಲೂಕು ಯೋಜನಾಧಿಕಾರಿ ಗೋಪಾಲ ಜಿ. ಮಾತನಾಡಿದರು. ಪ್ರಮುಖರಾದ ನವೀನ್, ವೀರೇಂದ್ರ ಅಗ್ಗಿಮಠ, ಸತೀಶ ಕೆ.ಎಚ್., ಮಹಾಲಕ್ಷಿö್ಮÃ, ಜಗದೇವಿ, ರೇಣುಕಾ, ಕಾಶಿಬಾಯಿ, ಮಹಾನಂದ, ಆರತಿ ಇತರರಿದ್ದರು.