ಸ್ವಾವಲಂಬಿ ಬದುಕಿಗೆ ಒತ್ತು ನೀಡಲಿ- ಬಸವರಾಜೇಂದ್ರ ಶರಣರು

60
Published on

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಕಾಲೇಜು ಕಾರ್ಯಕ್ರಮಕ್ಕೆ ಸೀಮಿತರಾಗದೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಝುಂಜರವಾಡ ದೇವಯೋಗ ಮಂದಿರದ ಬಸವರಾಜೇಂದ್ರ ಶರಣರು ಹೇಳಿದರು.

ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಕೊಕಟನೂರ ಪದವಿಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ

ಎನ್‌ಎಸ್‌ಎಸ್ ಘಟಕದ ಏಳು ದಿನಗಳ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ. ಶಿಬಿರದ ಸದ್ಬಳಕೆಯಿಂದ ಸ್ವಾವಲಂಬಿ ಬದುಕಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಸುಭಾಷ ಸೋನಕರ ಮಾತನಾಡಿ, ಎನ್‌ಎಸ್‌ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವುದರಿಂದ ದೈಹಿಕ,

ಮಾನಸಿಕ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದರು.

ಶಿಬಿರಾಧಿಕಾರಿ ಪ್ರಶಾಂತ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಿ.ಎಸ್.ಹುಲ್ಲೆಣ್ಣವರ, ಪಾಂಡುರಂಗ ನಾಯಿಕ, ಸಾಬು ಮಾಳಿ, ಸಂಬಾಜಿ ಗುರ್ಲಾಪುರ, ಲಕ್ಷ್ಮಣ ಅಂಬಾಜಿ, ಮುತ್ತಪ್ಪ ನಾಯಕ, ಮಂಜುನಾಥ ಅಂಬಾಜಿ, ನೀಲಾ ಅವಟಿ, ಪಾರೀಸ್ ಕಾಂಬಳೆ, ಜಿ.ಎಲ್.ಮೂಲಿಮನಿ, ಪಾಂಡಯ ಚವ್ಹಾಣ, ಮೀನಾಕ್ಷಿ ನಂದೇಶ್ವರ, ಶ್ರುತಿ ಅನಗಲಿ, ಸುಧಾರಾಣಿ ನೇಮಗೌಡ, ಅಪ್ಪಯ್ಯ ಮಠಪತಿ ಇತರರಿದ್ದರು. ರತನ ಅಂಬಾಜಿ ಸ್ವಾಗತಿಸಿದರು. ಚಿದಾನಂದ ಮಗದುಮ್ಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net