ಸ್ವಾವಲಂಬಿ ಜೀವನಕ್ಕೆ ಕೌಶಲ ಅಗತ್ಯ

aurad-2
Published on

ಔರಾದ್: ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಆದ್ಯತೆ ಕೊಡಬೇಕು. ವಿವಿಧ ಕೌಶಲಗಳು ಮೈಗೂಡಿಸಿಕೊಂಡು ಸ್ವಯಂ ಉದ್ಯೋಗ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕೆಂದು ಬೀದರ್ನ ಶಾರದಾ ತರಬೇತಿ ಕೇಂದ್ರದ ನಿರ್ದೇಶಕ ಶಿವಪ್ರಸಾದ ಹೇಳಿದರು.

ರಿಲಾಯನ್ಸ್ ಫೌಂಡೇಷನ್ ಹಾಗೂ ಶಾರದಾ ತರಬೇತಿ ಸಂಸ್ಥೆಯಿಂದ ಜಿಲ್ಲೆ ವಿವಿಧೆಡೆಯ ಮಹಿಳಾ ಸ್ವಸಹಾಯ ಸಂಘ ಸದಸ್ಯರಿಗೆ ಬುಧವಾರ ಹಮ್ಮಿಕೊಂಡ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಯುಗದಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧೆ ಇದೆ. ಮಹಿಳೆಯರು ಜೀವನದಲ್ಲಿ ಮುಂದೆ ಬರಬೇಕಾದರೆ ಕೌಶಲತೆ ಹೊಂದುವ ಅಗತ್ಯವಿದೆ ಎಂದರು.

ಶಾರದಾ ತರಬೇತಿ ಸಂಸ್ಥೆ ಜಿಲ್ಲೆಯ ನಿರುದ್ಯೋಗಿಗಳಿಗೆ ವೃತ್ತಿ ಬದುಕಿನ ತರಬೇತಿ ನೀಡಿ ಹಲವರಿಗೆ ಸ್ವಯಂ ಉದ್ಯೋಗ ಒದಗಿಸಿದೆ. 60ಕ್ಕೂ ಹೆಚ್ಚಿನ ರೀತಿಯ ವೃತ್ತಿ ಕೌಶಲ ತರಬೇತಿಗಳು ನೀಡಲಾಗುತ್ತಿದ್ದು, ಜನತೆ ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ರಿಲಾಯನ್ಸ್ ಫೌಂಡೇಷನ್ ಜಿಲ್ಲಾ ಯೋಜನಾಧಿಕಾರಿ ಶಿವಾನಂದ ಮಠಪತಿ, ಸಹಾಯಕ ಯೋಜನಾಧಿಕಾರಿ ರಾಮಚಂದ್ರ ಶೇರಿಕಾರ, ಸಂಗಪ್ಪ ಅತಿವಾಳ, ಸಂಪನ್ಮೂಲ ವ್ಯಕ್ತಿಗಳಾದ ಬಾಲಾಜಿ ಮೇತ್ರೆ, ರಾಜು, ಮಲ್ಲಿಕಾರ್ಜುನ, ಗುರುಪ್ರಸಾದ ಮೆಂಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net