ಸ್ವಾವಲಂಬನೆಯೇ ಸ್ವಾತಂತ್ರ್ಯ -   ಎಚ್.ಬಿ.ಮಂಜುನಾಥ್ ಹೇಳಿಕೆ

IMG-20230815-WA0017.jpg
Published on

ದಾವಣಗೆರೆ: ಸರ್ಕಾರದಿಂದ ಆರ್ಥಿಕ ಸಹಾಯ ಬಯಸುವ ಬದಲು ನಾವೇ ತೆರಿಗೆ ರೂಪದಲ್ಲಿ ಹೆಚ್ಚು ಕೊಡುವಂತಾಗಬೇಕು. ಈ ಸ್ವಾವಲಂಬನೆಯಿಂದ ಸ್ವಾತಂತ್ರ್ಯಕ್ಕೆ ಅರ್ಥ ಬರಲಿದೆ ಎಂದು ಪತ್ರಕರ್ತ ಎಚ್ .ಬಿ.ಮಂಜುನಾಥ್ ಹೇಳಿದರು.

ನಗರದ ತ್ರಿಶೂಲ್ ವಿದ್ಯಾಸಂಸ್ಥೆಯ ಕ್ಯಾಂಪಸ್ ನಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯವೆಂದರೆ ಮನಬಂದಂತೆ ಸ್ವಚ್ಛಂದವಾಗಿರುವುದು ಎಂದಲ್ಲ, ಪರಕೀಯರ ನಿಯಂತ್ರಣದಿಂದ ಹೊರಬಂದು ಕಾಯ್ದೆ ಕಾನೂನುಗಳನ್ನು ನಮಗೆ ಹಿತವಾಗುವಂತೆ ನಾವೇ ರೂಪಿಸಿಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು, ರಾಷ್ಟ್ರದ ಹಿತಕ್ಕಾಗಿ ಭೇದ ಭಾವವಿಲ್ಲದೆ ಅನ್ಯೋನ್ಯತೆಯಿಂದ ಕೂಡಿ ಬಾಳುವುದೇ ಆಗಿದೆ ಎಂದುಹೇಳಿದರು.

ಭಾರತ ದೇಶವು ವಿಶ್ವಕ್ಕೆ ಮಾದರಿಯಾಗಿದೆ, ಭವಿಷ್ಯದಲ್ಲಿ ಭಾರತವು ಮಹಾನ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಸಂದೇಹವಿಲ್ಲ. ವಿದ್ಯಾರ್ಥಿಗಳು, ಮಕ್ಕಳಿಗೂ ರಾಷ್ಟ್ರಪ್ರೇಮ ಹಾಗೂ ಕರ್ತವ್ಯ ಪ್ರಜ್ಞೆಯ ಪರಿಕಲ್ಪನೆ ನೀಡಬೇಕಿದೆ ಎಂದರು. ಸಂಸ್ಥೆಯ ಕೆ ಬಿ ಪ್ರಕಾಶ್, ಸುರೇಶ್ ಇದ್ದರು. ಮಕ್ಕಳು ರಾಷ್ಟ್ರ ನಾಯಕರ ವೇಷಭೂಷಣದಲ್ಲಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net