ಸ್ವಾರ್ಥಕ್ಕಾಗಿ ಬದುಕದೆ ನಿಸ್ವಾರ್ಥ ಜೀವನ ಸಾಗಿಸಿ

PH 14
Published on

ವಾಡಿ: ಹೆಣ್ಣು, ಹೊನ್ನು ಮಣ್ಣೆಂಬ ಸಂಪತ್ತಿನ ಸ್ವಾರ್ಥಕ್ಕಾಗಿ ಬದುಕಿದ ಎಲ್ಲರೂ ಮಣ್ಣಾಗಿ ಹೋಗಿದ್ದಾರೆ. ನಿಸ್ವಾರ್ಥದಿಂದ ಸಕಲ ಜೀವಿಗಳಿಗೆ ಲೇಸನ್ನು ಬಯಸಿದ ಶರಣರು, ಸಂತರು ಮಹಾತ್ಮರಾಗಿ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.

ಸದ್ಗುರು ಸಚ್ಚಿದಾನಂದ ಮಂದಿರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಾರುದ್ರಾಭಿಷೇಕ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಕಳ್ಳತನ ಮಾಡುವವನು ಭಯದಲ್ಲಿ ಬದುಕಿದರೆ, ಬೇಡುವವನು ಮುಜುಗರ ಪಡುತ್ತಾನೆ. ಆದರೆ ನೀಡುವವನು ಸಂತೋಷ ಮತ್ತು ಸಂತೃಪ್ತಿಯ ಬದುಕು ನಡೆಸುತ್ತಾನೆ. ಹಣತೆಯ ಬೆಳಕು ನೆರೆ-ಹೊರೆಯವರ ಮನೆ ಅಂಗಳಕ್ಕೆ ಹರಡುವಂತೆ ಪರೋಪಕಾರಿ ಜೀವನ ಸಾರ್ಥಕ ಎಂದರು.

ಶಿಕ್ಷಕಿ ರಜನಿ ಪಾಟೀಲ್ ಮಾತನಾಡಿದರು. ಶರಣಗೌಡ ಪಾಟೀಲ್ ಚಾಮನೂರ, ಸಿದ್ದಣ್ಣ ಕಲ್ಲಶೆಟ್ಟಿ, ಭೀಮಶಾ ಜೀರೋಳ್ಳಿ, ವಿಶ್ವನಾಥ ಪಡೆಶೆಟ್ಟಿ, ಚಂದ್ರಶೇಖರ ಪಾಟೀಲ್, ಅಯ್ಯಪ್ಪ ಪಂಚಾಳ, ವಿಶ್ವನಾಥ, ವಿನೋದ ಬಣಮಗಿ, ಚಿದಾನಂದ ತೊಡ್ಕೇರಿ, ಭೀಮಶಂಕರ ಹಡಪದ, ಸದಾಶಿವ ಮರಮಚಿ, ರೇವಣಸಿದ್ದ ಹೆರೂರ್, ವೀರೇಶ ಶೇರಿ, ಕೇದರನಾಥ, ಲಕ್ಷಿö್ಮÃಕಾಂತ್ ಪಂಚಾಳ, ಅಂಬರೇಶ, ಶಿವುಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net