

ಹಾಸನ : ಯಾವುದೇ ಒಂದು ಸೇವೆ ಮಾಡಬೇಕಾದರೆ ಅದು ಸ್ವಾರ್ಥಕ್ಕಾಗಿ ಇರಬಾರದು ಆಗ ಮಾತ್ರ ಅದು ಭಗವಂತನಿಗೆ ತಲುಪುತ್ತದೆ ಎಂದು ಲಯನ್ಸ್ ಗಂಗೆ ಗೌರಿ ಪ್ರಾಂತೀಯ ಸಮ್ಮೇಳನದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧೀಶ ನಿರ್ಮಾಲನಂದನಾಥ ಮಹಾಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಹಿತಾನುಡಿ ನುಡಿದರು.
ನಗರದ ಹೊರವಲಯ ಹೊಳೆನರಸೀಪುರ ರಸ್ತೆ, ಕೈಗಾರಿಕ ಪ್ರದೇಶದಲ್ಲಿರುವ ಪವನಪುತ್ರ ಕನ್ವೆನ್ಷನ್ ಹಾಲ್‌ನಲ್ಲಿ ಲಯನ್ಸ್ ಮತ್ತು ಲಿಯೋ ಕ್ಲಬ್ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಂಗೆ ಗೌರಿ ಪ್ರಾಂತೀಯ ಸಮ್ಮೇಳನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡುವ ಸೇವೆ ನಿಸ್ವಾರ್ಥ ಸೇವೆ ಆಗಿರಬೇಕು. ಲಯನ್ಸ್ ಸಂಸ್ಥೆ ಮೊದಲಿನಿಂದಲೂ ಅದ್ಬುತ ಸೇವೆಯನ್ನು ಮಾಡುತ್ತಾ ಬಂದಿದೆ. ಸೇವೆ ಮತ್ತು ಸಾಧನೆ ಮಾಡುವ ಮೂಲಕ ನಾನಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಸ್ವಾರ್ಥ ಬಿಟ್ಟು ಪ್ರೀತಿ ವಿಶ್ವಾಸದಿಂದ ಸೇವೆ ಮಾಡಿದಾಗ ಅಂತರಂಗ ಶುದ್ದಿ ಆಗುತ್ತದೆ. ಎಲ್ಲಾ ಪರಿಕರ ಇದ್ದು ಜ್ನಾನ ಇಲ್ಲದಿದ್ದರೇ ಯಾವುದು ಪ್ರಯೋಜನವಿಲ್ಲ ಎಂದು ಉದಾಹರಣೆ ನೀಡುವ ಮೂಲಕ ಅರ್ಥ ಮಾಡಿಸಿದರು. ಸೇವೆಯ ಮಾಡುವುದು ಎಂದರೇ ಬ್ಯಾಂಕಿನಲ್ಲಿ ಹಣ ಉಳಿತಾಯ ಮಾಡಿದಂತೆ ಪುಣ್ಯದ ಬ್ಯಾಲೆನ್ಸ್ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಎಲ್ಲಾರು ಒಟ್ಟಿಗೆ ಸೇರಿ ಅವಶ್ಯಕತೆ ಇರುವವರಿಗೆ ಸೇವೆ ಸಲ್ಲಿಸಿದಾಗ ಪುಣ್ಯದ ಬಾಕಿ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಣಬಹುದಾಗಿದೆ ಎಂದು ಸಲಹೆ ನೀಡಿದರು.
ಕಮಾಂಡಿಂಗ್ ಅಧಿಕಾರಿ ಮೆಡಲ್ ಅವಾರ್ಡ್ ವಿಜೇತ ಡಾ. ಪಿ.ಆರ್.ಎಸ್. ಚೇತನ್ ಮಾತನಾಡಿ, ಯಾವುದೇ ಒಂದು ಒಳ್ಳೆಯ ಕೆಲಸ ಮಾಡಬೇಕಾದರೇ ಯೋಚನೆ ಮಾಡಬೇಡಿ. ಅದಕ್ಕೆ ಉದಾಹರಣೆಯಾಗಿ ಇಡೀ ವಿಶ್ವವೇ ತಿರುಗಿ ನೋಡುವಾಗೆ ಪ್ರಧಾನಿ ನಿರ್ವಹಿಸಿದ್ದಾರೆ. ಲಯನ್ಸ್ ಸೇವಾಸಂಸ್ಥೆಯು ತನ್ನ ಉತ್ತಮ ಸೇವೆ ಮೂಲಕ ಎಲ್ಲಾರಲ್ಲೂ ಪ್ರೀತಿಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಚ್.ಆರ್. ಚಂದ್ರೇಗೌಡ ಮಾತನಾಡಿದರು.
ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್, ಕೃಷ್ಣಮೂರ್ತಿ ಹಾಗೂ ಸಿ.ಟಿ. ಕುಮಾರಸ್ವಾಮಿ ಮತ್ತು ಹಿರಿಯ ಸ್ವಾತಂತ್ರ ಹೋರಾಟಗಾರ ಜಿ.ಎಲ್. ಮುದ್ದೇಗೌಡ ಮತ್ತು ಎಚ್.ಎಂ. ಶಿವಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೆ ಸಂದರ್ಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶ ಶಂಭುನಾಥ ಸ್ವಾಮೀಜಿ, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಎಚ್.ಆರ್. ಚಂದ್ರೇಗೌಡ, ಸಿ.ಟಿ. ರತ್ನ, ಎಚ್.ಪಿ. ಅಶೋಕ್ ಕುಮಾರ್, ಕಾರ್ಯದರ್ಶಿ ಎಚ್. ರಮೇಶ್, ಖಜಾಂಚಿ ಸಿ. ಶಿವಸ್ವಾಮಿ, ಲಯನ್ಸ್ ಜಿಲ್ಲಾಧ್ಯಕ್ಷ ಬಿ.ಎಸ್. ಸೋಮಶೇಖರ್, ಕಾರ್ಯದರ್ಶಿ ಐ.ಜಿ. ರಮೇಶ್, ಖಜಾಂಚಿ ಮಂಜಪ್ಪ, ಜೂನ್ ಛೇರ‌್ಮನ್ ಡಾ. ರಾಕೇಶ್, ಸಿ.ಜೆ. ಕೇಶವಮೂರ್ತಿ, ಎನ್. ವೆಂಕಟೇಶ್, ಎಸ್.ಪಿ. ಪ್ರಕಾಶ್, ಬಿಂದು ಮಾಧವ್ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಶಾಂತ್ ಶೆಟ್ಟಿ ನಡೆಸಿಕೊಟ್ಟರು. ಅಥಿತಿಗಳ ಪರಿಚಯವನ್ನು ಎಚ್.ಎಲ್. ಮಲ್ಲೇಶ್ ಗೌಡ, ಕೆ.ಆರ್. ಮಲ್ಲೇಶ್ ಗೌಡ ಜಯರಮೇಶ್ ಇತರರು ಇದ್ದರು