

ಕಲಬುರಗಿ (ಬಿಗವಾನ್): ನಾವು ದೇಶವನ್ನು ರಕ್ಷಿಸಿದರೆ, ದೇಶ ನಮ್ಮನ್ನು ರಕ್ಷಣೆ ಮಾಡುತ್ತದೆ. ದೇಶ ಉಳಿದಾಗ ಮಾತ್ರ ಜಾತಿ, ಧರ್ಮ, ಪರಿವಾರ ಉಳಿಯುತ್ತದೆ. ಜನರು ಸ್ವಾರ್ಥ ಬದಿಗಿಟ್ಟು ದೇಶದ ಏಕತೆ, ಭಾವೈಕ್ಯತೆಗೆ ಶ್ರಮಿಸಬೇಕು ಎಂದು ಶ್ರೀ ಹವಾ ಮಲ್ಲಿನಾಥ ಮಹಾರಾಜ ನುಡಿದರು.
ಮಹಾರಾಷ್ಟçದ ಪುಣೆ ಜಿಲ್ಲೆಯ ದೌಂಡ್ ತಾಲೂಕಿನ ಬಿಗವಾನ್‌ನಲ್ಲಿನ ಶ್ರೀ ಭಕ್ತಿಲಿಂಗ ಹವಾ ಮಲ್ಲಿನಾಥ ಆಶ್ರಮದಲ್ಲಿ ಗುರುಪೂರ್ಣಿಮಾ ಉತ್ಸವದ ನಿಮಿತ್ತ ಭಾನುವಾರ ಭಕ್ತರಿಗೆ ಆಶೀರ್ವಚನ ನೀಡಿದರು. ಉತ್ಸವ ನಿಮಿತ್ತ ದೇಶದ ವಿವಿಧ ರಾಜ್ಯಗಳ ಸಹಸ್ರಾರು ಭಕ್ತರು ನಸುಕಿನ ಜಾವದಿಂದಲೇ ಸರತಿಯಲ್ಲಿ ನಿಂತು ದರ್ಶನ ಪಡೆದರು. ದಿನವಿಡೀ ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ನಿರಂತರ ಪ್ರಸಾದ, ವಸತಿ ವ್ಯವಸ್ಥೆ ಮಾಡಲಾಗಿತ್ತು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟಿçÃಯ ವಕ್ತಾರ ವೈಜನಾಥ ಝಳಕಿ ತಿಳಿಸಿದ್ದಾರೆ.