ಸ್ವಾಭಿಮಾನಿ ಪತ್ತಿನ ಸಂಘವನ್ನು ಅಭಿವೃದ್ಧಿಪಡಿಸಿ

Published on

ಯಳಂದೂರು : ಸಾಲ ಪಡೆದ ಷೇರುದಾರರು ಸಮಯಕ್ಕೆ ಸರಿಯಾಗಿ ಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸ್ವಾಭಿಮಾನದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊನ್ನೂರು ವೆಂಕಟೇಶ್ ತಿಳಿಸಿದರು.

ಪಟ್ಟಣ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸ್ವಾಭಿಮಾನಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಸಂಘದಲ್ಲಿ 600 ಕ್ಕೂ ಹೆಚ್ಚಿನ ಸದಸ್ಯರ ಒಳಗೊಂಡಿದ್ದು, ಇದರಲ್ಲಿ ಕೇಲವು ಸದಸ್ಯರಿಗೆ ವೈಯಕ್ತಿಕ ಸಾಲ ಯೋಜನೆಯಲ್ಲಿ ಸಾಲವನ್ನು ನೀಡಲಾಗಿದೆ. ಆದರೂ ಸಹ ಸಾಲವನ್ನು ಹಿಂತಿರುಗಿಸಲೂ ಮುಂದಾಗುತ್ತಿಲ್ಲ. ಇದ್ದರಿಂದ ಸಂಘದ ಬೆಳವಣಿಗೆ ಕುಂಟಿತಾವಾಗಿದೆ. ಈಗಾಗಲೆ ಸದಸ್ಯರಿಗೆ ಯಶ್ವಸಿನಿ ಯೋಜನೆಯಲ್ಲಿ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದ್ದು, ಇದರಿಂದ ಸದಸ್ಯರಿಗೆ ಸಾಕಷ್ಟು ಉಪಯುಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಭಿವೃದ್ಧಿ ಪರವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು. ವಾರ್ಷಿಕ ಸಭೆಯಲ್ಲಿ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯ ಲೆಕ್ಕವನ್ನು ಕಾರ್ಯದರ್ಶಿ ಸುಧಾಕರ್ ಮಂಡಿಸಿದರು.

ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ಎನ್.ಎಂ.ಮಾಧವಿ, ಹೊನ್ನೂರು ಲೀಲಾ, ಮಲ್ಲಿಕಾರ್ಜುನ, ನಾಗರಾಜು, ರಾಜಶೇಖರ್, ಪರಶಿವ, ಪ್ರಕಾಶ್, ಗೋವಿಂದ್, ನೀಲಯ್ಯ, ಚಿಕ್ಕಮಾದಯ್ಯ, ಯರಿಯೂರು ನಾಗೇಂದ್ರ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net