ಸ್ವಾಭಿಮಾನಿ ಕಲ್ಯಾಣ ಪರ್ವ ನಾಳೆಯಿಂದ

basavannaa
Published on

ಕಲಬುರಗಿ: ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ-೨೦೨೪ ಕಾರ್ಯಕ್ರಮ ಅ.೧೯, ೨೦ರಂದು ನಡೆಯಲಿದೆ ಎಂದು ನಾಗೇಂದ್ರಪ್ಪ ನಿಂಬರ್ಗಿ ತಿಳಿಸಿದರು. ಬಸವಕಲ್ಯಾಣದ ಬೇಗ ಸಭಾಮಂಟಪದಲ್ಲಿ ಅ.೧೯ರಂದು ಬೆಳಗ್ಗೆ ೧೧ಕ್ಕೆ ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು, ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಶ್ರೀ ಡಾ.ಚನ್ನಬಸವಾನಂದ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಮಾತೆ ಸತ್ಯಾದೇವಿ, ರಾಜೇಶ್ವರ ಶಿವಾಚಾರ್ಯರು, ಡಾ.ಜಯಬಸವಾನಂದ ಸೇರಿ ವಿವಿಧ ಪೂಜ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಚಿವ ರಹೀಂ ಖಾನ್ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ನಿವೃತ್ತ ನ್ಯಾಯಮೂರ್ತಿ ಎಸ್.ಎಸ್.ನಾಗರಾಳೆ ವಚನ ಸಂಗಮ ಪುಸ್ತಕ ಬಿಡುಗಡೆ ಮಾಡುವರು. ಮಧ್ಯಾಹ್ನ ೩-೩೦ಗಂಟೆಗೆ ರಾಷ್ಟಿçÃಯ ಬಸವದಳ ಯುವ ಗೋಷ್ಠಿಯಲ್ಲಿ ನಡೆಯಲಿದೆ. ಸಂಸದ ಸಾಗರ ಖಂಡ್ರೆ ಉದ್ಘಾಟಿಸುವರು. ಸಂಜೆ ೬ಕ್ಕೆ ಧರ್ಮ ಚಿಂತನಾಗೋಷ್ಠಿ ನಡೆಯಲಿದೆ ಎಂದರು. ಅ.೨೦ರಂದು ಬೆಳಗ್ಗೆ ೮-೩೦ಕ್ಕೆ ಧರ್ಮ ಚಿಂತನಗೋಷ್ಠಿ-೨ ನಡೆಯಲಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ನಂತರ ಸಮಾರೋಪ ನಡೆಯಲಿದೆ ಎಂದರು. ಜಗದೇವಿ ಚೆಕ್ಕಿ, ಜ್ಯೋತಿ ಕಟ್ಟಾಳೆ, ಸಂತೋಷ ಕಟ್ಟಾಳೆ, ಶರಣು ಮಹಾಜನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net