ಸ್ವಾಭಿಮಾನದ ಸಂಕೇತ ರಾಯಣ್ಣ

28ALD01
ಹಟ್ಟಿ ಗ್ರಾಮದಲ್ಲಿ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಖಂಡರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
Published on

ಅಳವಂಡಿ (ಕೊಪ್ಪಳ): ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಹೊರಾಟ ಮನೋಭಾವ ಇಂದಿನ ಯುವ ಪಿಳಿಗೆಗೆ ಭದ್ರ ಬುನಾದಿಯಾಗಿದೆ. ರಾಯಣ್ಣನವರ ಪರಾಕ್ರಮ, ದೃಡ ಸಂಕಲ್ಪ, ಸ್ವಾಭಿಮಾನವನ್ನು ನಾವುಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಂಥಿಣಿ ಬ್ರಿಜ್ ಕಾಗಿನೆಲೆ ಕನಕ ಗುರುಪೀಠದ ಶ್ರೀಸಿದ್ದರಾಮನಂದಪುರಿ ಸ್ವಾಮಿಗಳು ತಿಳಿಸಿದರು.


ಸಮೀಪದ ಹಟ್ಟಿ ಗ್ರಾಮದಲ್ಲಿ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಡೆದ ಸಭೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಸೋಮವಾರ ಮಾತನಾಡಿದರು.


ಭಕ್ತಿಯ ಶಕ್ತಿ ಕನಕದಾಸರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ್ದಾರೆ. ಇಂತಹ ಮಹಾನ್ ನಾಯಕರ ಆದರ್ಶ, ದೇಶಪ್ರೇಮ, ಸ್ವಾಮಿಮಾನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ವರು ಒಂದೆ ಎಂಬ ಪರಿಕಲ್ಪನೆಯನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಅಭಿವೃದ್ದಿ ಹೊಂದಲು ಸಾದ್ಯ, ದುಡ್ಡಿಗಾಗಿ ಜೀವನದ ಹೋರಾಟ ಇರಬಾರದು ಅಭಿವೃದ್ದಿಗೆ ಹೋರಾಟ ಇರಬೇಕು ಇದು ಎಲ್ಲರಿಗೂ ಒಳಿತು ಮಾಡುವಂತಿರಬೇಕು ಎಂದರು.


ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿ ಸಮಾನತೆ ಸಾರಿದ ದಾಸಶ್ರೇಷ್ಟ ಕನಕದಾಸರಾಗಿದ್ದಾರೆ. ಅದೇ ರೀತಿ 12 ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾಜ ಕಟ್ಟಕಡೆಯ ವ್ಯಕ್ತಿಗಳಿಗೂ ಅವಕಾಶ ನೀಡಿ ಸಮಾನತೆ ಸಾರಿದ್ದಾರೆ. ಜೀವನದಲ್ಲಿ ಆದರ್ಶ ಮನೋಭಾವ, ಹೋರಾಟವನ್ನು ರೂಡಿಸಿಕೊಳ್ಳಬೇಕು. ಮೂರ್ತಿ ಸ್ಥಾಪನೆ ಸಮಾಜದ ಅಭಿವೃದ್ದಿ ಹಾಗೂ ಸಮಾನತೆಯ ಪರಿಕಲ್ಪನೆ ಆಗಿದೆ ಎಂದರು.


ಅಳವಂಡಿ ಶ್ರೀಸಿದ್ದೇಶ್ವರ ಮಠದ ಶ್ರೀಮರುಳಾರಾದ್ಯ ಶಿವಾಚಾರ್ಯ, ಹಾಲವರ್ತಿ ಶ್ರೀಶಿವಸಿದ್ದೇಶ್ವರ ಮಹಾಸ್ವಾಮಿ, ಪ್ರಮುಖರಾದ ಬಸವರಾಜ ಹಿಟ್ನಾಳ, ರಾಮಕೃಷ್ಣ ದೊಡ್ಡಮನಿ, ರಾಜಶೇಖರ ಹಿಟ್ನಾಳ, ಭರಮಪ್ಪ ನಗರ, ತೋಟಪ್ಪ, ನೀಲಪ್ಪ, ನಿಂಗನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net