ಸ್ವಾಭಿಮಾನದ ಬದುಕಲು ಕಲಿಸಿದ ನಂಜುಂಡಸ್ವಾಮಿ

TKE RAITA)
ತರೀಕೆರೆ ಎಪಿಎಂಸಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಜನ್ಮದಿನಾಚರಿಸಲಾಯಿತು. ಎಚ್.ಸೋಮಶೇಖರಯ್ಯ, ಮೂಡಲಗಿರಿಯಪ್ಪ, ತೀರ್ಥಪ್ಪ, ಟಿ.ಎನ್.ವಿಶುಕುಮಾರ್, ರವಿ ಬಾಸೂರು ಇತರರಿದ್ದರು.
Published on

ತರೀಕೆರೆ: ಪ್ರೊ. ಎಂ.ಡಿ.ನಂಜುಂಡಸ್ವಾಮಿ ಜನ್ಮದಿನವನ್ನು ರೈತರ ಹೋರಾಟ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್.ಸೋಮಶೇಖರಯ್ಯ ತಿಳಿಸಿದರು.

ಎಪಿಎಂಸಿ ಸಭಾಂಗಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ 89ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈತ ಸಂಘವನ್ನು ಹುಟ್ಟುಹಾಕಿದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅನ್ನದಾತರಿಗೆ ಬೆನ್ನೆಲುಬಾಗಿ ನಿಂತಿದ್ದರು. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಕೊಡಿಸುವುದಕ್ಕಾಗಿ ಹೋರಾಟ ಮಾಡಿದ್ದಲ್ಲದೆ, ರೈತರು ಗೌರವದಿಂದ ಬದುಕಲು ಮಾರ್ಗದರ್ಶನ ನೀಡುತ್ತಿದ್ದರು. ಅವರು ಮಾಡಿದ ಸತ್ಕಾರ್ಯ ಎಂದೆಂದಿಗೂ ಜೀವಂತವಾಗಿರಲಿವೆ ಎಂದರು.

ರೈತ ಮುಖಂಡ ಮೂಡಲಗಿರಿಯಪ್ಪ, ಗ್ರಾಪಂ ಅಧ್ಯಕ್ಷ ತೀರ್ಥಪ್ಪ, ಕಡೂರು ತಾಲೂಕು ರೈತ ಸಂಘದ ಅಧ್ಯಕ್ಷ ರವಿ ಬಾಸೂರು, ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್, ಪ್ರಮುಖರಾದ ಹೇಮಂತ್, ಲಿಂಗಾರಾಧ್ಯ, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net