ಸ್ವಾಭಿಮಾನಕ್ಕೆ ಕೈಜೋಡಿಸಿ

mallikarjun khuba
Published on

ಬಸವಕಲ್ಯಾಣ: ಜಗತ್ತಿಗೆ ಪ್ರಥಮ ಬಾರಿ ಸಮಾನತೆ ಸಂದೇಶ, ಸಮ ಸಮಾಜ ನಿರ್ಮಾಣದ ಬೋಧನೆ ಮಾಡಿದ ಶರಣ ನಾಡಿನ ಜನ ಸ್ವಾಭಿಮಾನಕ್ಕೆ ಕೈಜೋಡಿಸಬೇಕು. ಸ್ಥಳೀಯರಿಗೆ ಅನ್ಯಾಯ ಮಾಡಿದವರಿಗೆ ಪಾಠ ಕಲಿಸಿ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಮತದಾರರು ಮಾಡಬೇಕೆಂದು ಮಾಜಿ ಶಾಸಕ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಹೇಳಿದರು.

ಬೆಂಗಲಿಗರೊಂದಿಗೆ ನಗರದಲ್ಲಿ ಸಂಚರಿಸಿ ಮತಯಾಚನೆ ಮಾಡಿ, ನಮ್ಮತನವನ್ನು ಯಾರಿಗೂ ಬಿಟ್ಟುಕೊಡಬಾರದು. ಸ್ಥಳೀಯರಿಗೆ ಬಿಟ್ಟು ಹೊರಗಿನವರಿಗೆ ಮಣೆ ಹಾಕಿದ ಬಿಜೆಪಿಗೆ ಪಾಠ ಕಲಿಸಬೇಕಿದೆ ಎಂದರು. ಅಂಗಡಿ, ತರಕಾರಿ ತಳ್ಳು ಗಾಡಿ, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರಿಗೆ ಭೇಟಿ ಮಾಡಿ ಮತಯಾಚನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net