

ಕಲಬುರಗಿ: ಅಭಿನವ ಭಾರತ ಕಟ್ಟಿ ದೇಶದ ಯುವಕರಲ್ಲಿ ಸ್ವಾತಂತ್ರದ ಕಿಚ್ಚು ಬೆಳೆಸಿ, ದೇಶಕ್ಕಾಗಿ ಸೇವೆ ಸಲ್ಲಿಸಲು ವೀರ ಸಾವರ್ಕರ್ ಪ್ರೇರಣೆ ನೀಡುತ್ತಿದ್ದರು ಎಂದು ಸಾಮಾಜಿಕ ಚಿಂತಕ ನಿತೀನ್ ಶಾಸ್ತ್ರಿ ಹೇಳಿದರು.
ನಗರದ ಖಮೀತ್ಕರ್ ಭವನದಲ್ಲಿ ಯುವ ಪ್ರೇರಣೆ ಗ್ರಾಮೀಣ ಅಭಿವೃದ್ಧಿ ಸೇವಾ ಸಮಿತಿ ಹಾಗೂ ಅಭಿನವ ಭಾರತ ತಂಡದಿಂದ ಮಂಗಳವಾರ ಸಂಜೆ ಆಯೋಜಿಸಿದ್ದ ವಿನಾಯಕ್ ದಾಮೋದರ ಸಾವರ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿ, ಸಾವರ್ಕರ್ ಮಾತುಗಳು ಯುವಕರ ಮೇಲೆ ಭಾರಿ ಪ್ರಭಾರ ಬೀರಿ ದೇಶ ಸೇವೆಗೆ ಸ್ಫೂರ್ತಿ ತುಂಬುತ್ತಿದ್ದರು. ಸ್ಪರ್ಷ ಮಣಿಯಂತೆ ಕೆಲಸ ಮಾಡುತ್ತಿದ್ದ ಅವರಿಂದ ಪ್ರೇರಣೆ ಪಡೆದವರು ಕ್ರಾಂತಿಕಾರಿಗಳಾಗಿ ದೇಶ ಸೇವೆಗೆ ಮುಂದಾಗುತ್ತಿದ್ದರು ಎಂದು ಹೇಳಿದರು.
ಭಾರತಕ್ಕೆ ಸತ್ಯಾಗ್ರಹ, ಅಹಿಂಸೆಯ ಮಾರ್ಗದಿಂದ ಸ್ವಾತಂತ್ರÈ ದೊರಕಲಿಲ್ಲ. ಕ್ರಾಂತಿಕಾರಿಗಳ ರಕ್ತ, ಬಲಿದಾನಂದ ಮೂಲಕ ಸ್ವಾತಂತ್ರÈ ದೊರಕಿದೆ. ಖಡ್ಗವನ್ನು ಹಿಡಿಯದೆ ಮುಕ್ತಿ ದೊರಯಲಿಲ್ಲ. ಸಂಘರ್ಷಮಯ ಸ್ವಾತಂತ್ರÈ ಹೋರಾಟವಾಗಿತ್ತು. ಸಾವರ್ಕರ್ ಒಂಬತ್ತನೇ ವಯಸ್ಸಿನಲ್ಲಿ ತಾಯಿಯನ್ನು, ೧೮ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರೂ, ಜನ್ಮತಃ ದೇಶಭಕ್ತಿಯನ್ನು ಮೈಗೂಡಿಸಿಕೊಂಡೇ ಬೆಳೆದರು. ಕ್ರಾಂತಿಕಾರಿ ಮನೋಭಾವ ಬೆಳೆಸಿಕೊಂಡಿದ್ದರು ಎಂದರು.
ಇತಿಹಾಸದ ನೈಜತೆ ಅರಿಯಬೇಕು. ಸನಾತನ ಹಿಂದು ಧರ್ಮದ ರಕ್ಷಣೆಗಾಗಿ ಹೋರಾಡಬೇಕು. ಜಾತಿಗಳ ಮಧ್ಯದ ಭೇದ ಭಾವ ದೂರಗೊಳಿಸಲು ಪುಣೆಯ ರತ್ನಗಿರಿಯಲ್ಲಿ ಪತಿತ ಪಾವನ ಮಂದಿರ ನಿರ್ಮಿಸಿ, ಎಲ್ಲರೊಂದೇ ಎಂಬ ಸಮಾನತೆ ಮೂಡಿಸಿದರು ಎಂದರು.
ಮುಖ್ಯ ವಕ್ತಾರ ಮುರಳಿ ಪೂಜಾರ ಮಾತನಾಡಿ, ಸಾವರ್ಕರ್ ರಾಷ್ಟçವಾದಿ, ಸಮಾಜ ಸುಧಾರಕ, ಕ್ರಾಂತಿಕಾರಿ ಎಂಬುದು. ಆದರೆ ಎಲ್ಲವನ್ನು ಮೀರಿದ್ದ ವ್ಯಕ್ತಿತ್ವ ಸಾವರ್ಕರ್ ಅವರದ್ದು. ದೇಶ ವಿಭಜನೆಯ ಮುನ್ಸೂಚನೆ ನೀಡಿದ್ದು ಸಾವರ್ಕರ್. ಅವರ ಆಡಳಿತ ವಿಭಾಗ, ವಿದೇಶಿ ನೀತಿ, ಅಂತರಾಡಳಿತ, ಸೌರ್ವಭೌಮತ್ವ ರಕ್ಷಣೆ ಬಗ್ಗೆ ಅಪಾರ ಜ್ಞಾನವುಳ್ಳವರಾಗಿದ್ದರು. ಎಲ್ಲ ಆಯಾಮಗಳಿಂದ ಸಾವರ್ಕರ್ ಅವರನ್ನು ನೋಡಿದಾಗ ಮಾತ್ರ ಅವರ ವ್ಯಕ್ತಿತ್ವ ತಿಳಿಯಲಿದೆ ಎಂದರು.
ಸಹನಾ ದೇಶಪಾಂಡೆ, ಮಾಲಾ ವೈಯಕ್ತಿಕ ಗೀತೆ ಪ್ರಸ್ತುತಪಡಿಸಿದರು. ಕರ್ನಾಟಕ ಉತ್ತರ ಪ್ರಾಂತದ ಪ್ರಚಾರ ಪ್ರಮುಖ ಕೃಷ್ಣಾ ಜೋಶಿ, ಮ¯್ಲÁರಾವ ಮ¯್ಲೆ, ಶ್ವೇತಾ ಸರಾಫ್, ದಯಾಘನ ಧಾರವಾಡಕರ್, ಬಾಬುರಾವ್ ಚವ್ಹಾಣ್, ದಿಲೀಪ ಪಾಟೀಲ್, ಅರವಿಂದ ನವಲಿ, ಸುಶಾಂತ ದೇಶಮುಖ, ಅಶ್ವಿನ್‌ಕುಮಾರ, ಸತೀಶ ಮಾವೂರ, ಶರಣಪ್ಪ ತಳವಾರ ಇತರರಿದ್ದರು.