ಸ್ವಾತಂತ್ರ್ಯದ ಅಮೃತ ಮಹೋತ್ಸವ: ಬೃಹತ್ ಬೈಕ್ ರ‌್ಯಾಲಿ

ANP WEB 1
Published on

ಆನಂದಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಶನಿವಾರ ಬೃಹತ್ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು. ಇಲ್ಲಿಗೆ ಸಮೀಪದ ಮುರುಘಾ ಮಠದ ಆವರಣದಲ್ಲಿ ಶಾಸಕ ಹರತಾಳು ಹಾಲಪ್ಪ ರ‌್ಯಾಲಿಗೆ ಚಾಲನೆ ನೀಡಿದರು. ಮುರುಘಾ ಮಠದಿಂದ ಆಚಾಪುರ ಗ್ರಾಮದ ಮೂಲಕ, ಯಡೇಹಳ್ಳಿಯ ಗಣಪತಿ ದೇವಾಲಯ, ಆನಂದಪುರದ ದಾಸಕೊಪ್ಪ ವೃತ್ತ, ಹೊಸಕೊಪ್ಪ, ಕಣ್ಣೂರು, ಹಿರೇಹಾರಕ, ಭೈರಾಪುರ, ಗೌತಮಪುರ, ತ್ಯಾಗರ್ತಿ, ಅಡ್ಡೇರಿ- ಹೊಸೂರು ಮಾರ್ಗವಾಗಿ ವಾಪಸ್ ಆನಂದಪುರ ಬಸ್ ನಿಲ್ದಾಣದ ವರೆಗೆ ರ‌್ಯಾಲಿ ನಡೆಯಿತು. 570ಕ್ಕೂ ಅಧಿಕ ಬೈಕ್‌ನಲ್ಲಿ ಶಕ್ತಿ ಕೇಂದ್ರದ ಸದಸ್ಯರು ಮತ್ತು ವಿವಿಧೆಡೆಯಿಂದ ಆಗಮಿಸಿದ್ದ ಕಾರ್ಯಕರ್ತರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net