

ಚಿತ್ತಾಪುರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಪ್ರಮುಖವಾಗಿದ್ದು, ಅಸಂಖ್ಯಾತ ಜನರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿAಗ್ ಕಾಲೇಜಿನ ವಿದ್ಯುನ್ಮಾನ ಮತ್ತು ಉಪಕರಣ ವಿಭಾಗದ ಮುಖ್ಯಸ್ಥ ಪ್ರೊ.ಸಂಜಯ ಮಾಕಲ್ ಹೇಳಿದರು.
ಮಹಾದೇವಮ್ಮ ಬಿ.ಪಾಟೀಲ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಟಿಪ್ಪು ಸುಲ್ತಾನ್, ರಾಜಾ ವೆಂಕಟಪ್ಪ ನಾಯಕ, ಮೈಲಾರ ಮಹಾದೇವಪ್ಪ ಅವರ ದೇಶಪ್ರೇಮ ಮೆಚ್ಚುವಂತಹದ್ದು. ಕೆಲವರು ಸೋತರೂ ಶರಣಾಗಲಿಲ್ಲ. ಮಹಾದೇವಪ್ಪ ರಾಂಪುರೆ, ಕಮಲಾದೇವಿ, ಹರ್ಡೇಕರ್ ಮಂಜಪ್ಪ ಕರ್ನಾಟಕದ ಗಾಂಧಿಗಳಾಗಿದ್ದಾರೆ ಎಂದು ಬಣ್ಣಿಸಿದರು.
ನಾಗರೆಡ್ಡಿ ಪಾಟೀಲ್ ಕರದಾಳ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ತಾಲೂಕು ಗೌರವ ಸಲಹೆಗಾರ ನಾಗರಾಜ ಭಂಕಲಗಿ, ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ ಮಾತನಾಡಿದರು.
ಪ್ರಾಚಾರ್ಯ ಸೋಮಶೇಖರ ಕಲಶೆಟ್ಟಿ, ಪ್ರಮುಖರಾದ ವಿನೋದಕುಮಾರ ಜನೇವರಿ, ರಾಜೇಂದ್ರ ಮಾಡಬೂಳ, ಸಿದ್ದಲಿಂಗ ಬಾಳಿ, ಜಗದೇವ ದಿಗ್ಗಾಂವಕರ್, ವೆಂಕಟೇಶ ಬಳಿಚಕ್ರ, ರಮೇಶ ಬಟಗೇರಿ, ಸ್ವರ್ಣಲತಾರೆಡ್ಡಿ ದುಗನೂರ, ಮಹ್ಮದ್ ಇಬ್ರಾಹಿಂ, ಚಂದ್ರಶೇಖರ ಊಟಗೂರ, ಬಸಪ್ಪ ಯಂಬತ್ತನಾಳ, ನರಸಿಂಹ ಆಲಮೇಲಕರ್, ಶಾಂತಕುಮಾರ ಮಳಖೇಡ, ಆನಂದ ಪಾಟೀಲ್ ನರಿಬೋಳ, ಲಿಂಗಪ್ಪ ಮಲ್ಕನ್, ನಿಂಗಪ್ಪ ಗೋಡೆಕರ್, ಸಿದ್ದಲಿಂಗಯ್ಯ ಸ್ವಾಮಿ ಕೋಡಗಿಮಠ, ಅಂಬರೀಷ್ ಸುಲೇಗಾಂವ್, ವಿನೋದ ಬನಸೋಡೆ ಇತರರಿದ್ದರು.
ಪೂಜಾ ಭಂಕಲಗಿ ಪ್ರಾಸ್ತಾವಿಕ ಮಾತನಾಡಿದರು. ಶಾಂತಿಪ್ರಿಯಾ ಸ್ವಾಗತಿಸಿದರು. ಪಾವನಿ, ಮರಿಯಂ ನಿರೂಪಣೆ ಮಾಡಿದರು. ಅಂಬರೀಶ್ ವಂದಿಸಿದರು. ಕಸಾಪ ಆಜೀವ ಸದಸ್ಯರನ್ನು ಸನ್ಮಾನಿಸಲಾಯಿತು.