ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿ

14blrp3
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪುರಸಭೆಯಿಂದ ಆಯೋಜಿಸಿದ್ದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ತೀರ್ಥಕುಮಾರಿ, ಜಮೀಲಾ ತೌಫಿಕ್, ಜಗದೀಶ್ ಇತರರು ಇದ್ದರು.
Published on

ಬೇಲೂರು: ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ 76ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶದಂತೆ ಮೂರು ದಿನಗಳ ಕಾಲ ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು. ಇದಕ್ಕಾಗಿ ಪುರಸಭೆಯಿಂದ ಒಂದು ಸಾವಿರ ಧ್ವಜ ನೀಡಲಾಗಿದೆ. ಧ್ವಜವನ್ನು ಹೇಗೆ, ಯಾವ ರೀತಿ ಹಾರಿಸಬೇಕು, ಇಳಿಸಬೇಕು ಎಂಬುದರ ಬಗ್ಗೆ ಪ್ರತಿಜ್ಞಾ ವಿಧಿ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.

ಯುವಕರು ದೇಶ ಪ್ರೇಮದ ಬಗ್ಗೆ ನಿರಾಶಕ್ತಿ ಹೊಂದಿರುವುದು ಬೇಸರದ ಸಂಗತಿ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ದೇಶ ಭಕ್ತಿ ಪ್ರದರ್ಶಿಸಿದರೆ ಸಾಲದು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು, ಯೋಧರ ತ್ಯಾಗ ಬಲಿದಾನವನ್ನು ತಿಳಿದು ಗೌರವಿಸಬೇಕು ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ಜಮೀಲಾ ತೌಫಿಕ್, ಸದಸ್ಯರಾದ ರತ್ನಾ, ಸೌಭಾಗ್ಯಾ, ಜಗದೀಶ್, ಗಿರೀಶ್, ಪ್ರಭಾಕರ್, ಫಯಾಜ್ ಅಹಮದ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಆರೋಗ್ಯಾಧಿಕಾರಿಗಳಾದ ಲೋಹಿತ್, ಜ್ಯೋತಿ, ಸ್ಥಳೀಯರಾದ ಲಿಂಗರಾಜ್, ನರಸಿಂಹ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net