ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಮರೆಯದಿರಿ

1108 kml 01
Published on

ಕಮಲಾಪುರ: ಕೋಟ್ಯಂತರ ಜನರ ಪ್ರಾಣ ತ್ಯಾಗದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮ ಜೀವವಿರುವವರೆಗೂ ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನವನ್ನು ಮರೆಯಬಾರದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಹೇಳಿದರು.

ಮಹಾಗಾಂವ್ ಕ್ರಾಸ್‌ನ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಾತಂತ್ರö್ಯದ ಸಾರ್ಥಕತೆ ಹಾಗೂ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆಯ ಮೇಲೆ ದೇಶ ಅಪಾರ ನಂಬಿಕೆ ಇಟ್ಟಿದೆ. ದೇಶದ ಭಾವಿ ನಾಯಕರಾಗಿದ್ದು, ಉನ್ನತ ಶಿಕ್ಷಣ ಪಡೆದು ಶ್ರೇಷ್ಠ ದೇಶ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.

ಕಲಬುರಗಿ ಯಜ್ಞ ತಂಡದ ಸದಸ್ಯೆ ಭಾರ್ಗವಿ ಕುಲಕರ್ಣಿ ಉಪನ್ಯಾಸ ನೀಡಿದರು. ಅವರಾದ (ಬಿ)ನಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮಹಾಗಾಂವ್ ಕ್ರಾಸ್ ಶಾಲೆಯ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಪ್ರಭಾರಿ ಮುಖ್ಯಗುರು ಸುರೇಖಾ ಹೊನ್ನಳಿ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಮಲ್ಲಿಕಾರ್ಜುನ ಬಿರಾದಾರ, ರಾಜೇಂದ್ರ ಮಾಡಬೂಳ, ಸಿದ್ದಲಿಂಗ ದಿಗ್ಗಾಂವ್, ಜ್ಯೋತಿ ಕೋಟನೂರ, ಪಲ್ಲವಿ, ರೇಷ್ಮಾ, ವಿಜಯಲಕ್ಷ್ಮೀ, ಸರಸ್ವತಿ ಇತರರಿದ್ದರು. ಅಂಬಾರಾಯ ಮಡ್ಡೆ ಪ್ರಾಸ್ತಾವಿಕ ಮಾತನಾಡಿದರು. ಶಿವಶಂಕರ ಬಿರಾದಾರ ಪ್ರಾರ್ಥಿಸಿದರು. ರವೀಂದ್ರ ಬಿ.ಕೆ. ನಿರೂಪಣೆ ಮಾಡಿದರು. ಸುಗಂದಾ ರಟಕಲ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net