

ಯಾದಗಿರಿ : ಜಿಲ್ಲಾದ್ಯಂತ ಮಂಗಳವಾರ 77ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮವನ್ನು ಜನತೆ ಸಂಭ್ರಮದಿಂದ ಆಚರಿಸಿದರು. ಶಾಲಾ, ಕಾಲೇಜುಗಳು, ವಿವಿಧ ಸಂಘ-ಸಂಸ್ಥೆಗಳ ಕಚೇರಿಗಳಲ್ಲಿ ಬೆಳಗ್ಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ದೇಶಪ್ರೇಮ ಮೆರೆದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ದೇಶದ ಸ್ವಾತಂತ್ರ್ಯ ದಿನ ಎಲ್ಲ ಭಾರತಿಯ ನಾಗರಿಕರಿಗೆ ಅತ್ಯಂತ ಮಹತ್ವದ್ದಾಗಿದೆ. ಪರಕೀಯರ ಕೈಯಿಂದ ದೇಶವನ್ನು ಬಂಧಮುಕ್ತಗೊಳಿಸಲು ಲಕ್ಷಾಂತರ ಹೋರಾಟಗಾರರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದರು.
ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಡಾ.ವಿರಬಸವಂತರಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ದೇವೇಂದ್ರನಾಥ ನಾದ ಮತ್ತು ಗುರು ಕಾಮಾ, ಪ್ರಮುಖರಾದ ಖಂಡಪ್ಪ ದಾಸನ್, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಪರುಶುರಾಮ ಕುರಕುಂದಿ, ವೀಣಾ ಮೋದಿ, ಭೀಮಾಶಂಕರ ಬಿಲ್ಲವ, ರಾಘವೇಂದ್ರ ಯಕ್ಷಿಂತಿ, ಮೌನೇಶ ಬೆಳಗೇರ, ಕರಬಸಪ್ಪ ಬಿಳಾರ, ಎಸ್ಪಿ ನಾಡೇಕರ, ಶಂಕರ ಕರಣಗಿ, ರಮೇಶ ದೊಡಮನಿ, ಸುನೀತಾ ಚೌವಾಣ, ಸ್ನೇಹಾ ರಸಾಳಕರ, ರಮಾದೇವಿ ಕವಲಿ, ಶಂಕರ ಸೋನಾರ, ನಾಗಪ್ಪ ಗಚ್ಚಿನಮನಿ, ಭೀಮರಾಯ ಜಂಗಳಿ, ಚಂದ್ರಶೇಖರ ಕಡೆಸೂರ, ಮಲ್ಲು ಕೋಲಿವಾಡ ಇದ್ದರು.
ಶ್ರೀರಕ್ಷಾ ವಿದ್ಯಾಮಂದಿರ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ದೇಶದ ಏಕತೆ, ಶಾಂತಿಯ ಸಂದೇಶ ವಿಶ್ವಕ್ಕೆ ಮಾದರಿಯಾಗಿದೆ ಎಂದು ಯಾದಗಿರಿ ಕೋಟೆಯಲ್ಲಿನ ಭುವನೇಶ್ವರಿ ದೇವಸ್ಥಾನದ ಉಪಾಸಕರಾದ ಶಿವರಾಮ ಜೀ ತಿಳಿಸಿದರು.
ನಗರದ ಮಾತಾ ಮಾಣಿಕೇಶ್ವರಿ ಬಡಾವಣೆಯ ಶ್ರೀರಕ್ಷಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂಸ್ಥೆ ಕಾರ್ಯದಶರ್ಿ ಕೃಷ್ಣಮೂತರ್ಿ ಕುಲಕಣರ್ಿ, ಸಿಆರ್ಪಿ ಗುಂಡೂರಾವ್, ಪತ್ರಕರ್ತ ಶಂಕ್ರಪ್ಪ ಅರುಣಿ, ಆನಂದ ಗೋರ್ಕಲ್, ಶ್ರೀನಿವಾಸ ರಾವ್ ಕುಲಕಣರ್ಿ ಇದ್ದರು. ಶಾಲೆಯ ಮುದ್ದು ಮಕ್ಕಳ ಛದ್ಮವೇಶ ಗಮನ ಸೆಳೆಯಿತು.
ಶಹಾಪುರ ಕಸಾಪ: ನಗರದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯರ್ಾಲಯದಲ್ಲಿ ಲ್ಲಿ 77ನೇ ಸಾತಂತ್ರ್ಯ ದಿನೋತ್ಸವದ ಧ್ವಜಾರೋಹಣವನ್ನು ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ನೇರವೆರಿಸಿದರು.