

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.
ಸದಾ ಕೆಲಸದಲ್ಲೇ ನಿರತರಾಗಿರುವ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಸೌಂಡ್ ಬಾತ್ ಧ್ಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಫಾರೆಸ್ಟ್ ಎಸ್‌ಓಎಸ್ ವತಿಯಿಂದ ವೆಲ್‌ನೆಸ್ ತಜ್ಞ ಗಣೇಶ್ ಶ್ರೀನಿವಾಸನ್ ಅವರ ನೇತೃತ್ವದಲ್ಲಿ ನಡೆದ ಧ್ಯಾನ ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮನಸ್ಸಿಗೆ ಶಾಂತಿ ಹಾಗೂ ದೇಹಕ್ಕೆ ವಿಶ್ರಾಂತಿ ನೀಡುವ ಅಪೂರ್ವ ಅನುಭವವನ್ನು ಪಡೆದರು. ವಿಭಿನ್ನ ಕಾರ್ಯಕ್ರಮಗಳು ಮನೋಸ್ಥೈರ್ಯ ಹೆಚ್ಚಿಸಲು ಅತ್ಯಂತ ಮುಖ್ಯವೆಂದು ಅರಣ್ಯಾಧಿಕಾರಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.