

ಶೃಂಗೇರಿ: ಇನ್ನರ್ವ್ಹೀಲ್ ಸಂಸ್ಥೆಯಿಂದ ಸೋಮವಾರ ಸ್ವಾತಂತ್ರೊ್ಯೕತ್ಸವ ಆಚರಿಸಲಾಯಿತು. ರೋಟರಿ ಭವನದ ಎದುರು ನಿವೃತ ಪ್ರಾಧ್ಯಾಪಕ ಜನಾರ್ಧನ್ ಶ್ಯಾನುಭೋಗ್ ಅವರು ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ಎಂದರೆ ಸ್ವೇಚ್ಛಚಾರ ಅಲ್ಲ. ಸಂವಿಧಾನದ ಆಶಯದಂತೆ ಭಾರತೀಯರು ಮತಬೇಧ ಮರೆತು ಒಗ್ಗಟ್ಟಿನಿಂದ ಬದುಕಬೇಕು ಎಂದರು.
ಅಧ್ಯಕ್ಷೆ ಪ್ರಿಯದರ್ಶಿನಿ ಹೆಗಡೆ ಮಾತನಾಡಿ, ಸ್ವಾತಂತ್ರೋತ್ಸವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಹಾಗೆಯೆ ದೇಶಕ್ಕೆ ನಾವು ನೀಡುವ ಕೊಡುಗೆ ಏನು? ಎಂಬ ವಿವೇಚನೆ ಪ್ರತಿಯೊಬ್ಬರಲ್ಲಿ ಇರಬೇಕು. ಶಾಂತಿ, ಸೌಹಾರ್ದತೆ, ಸ್ನೇಹದಿಂದ ಬದುಕಿದ್ದಾಗ ಮಾತ್ರ ದೇಶದ ಉನ್ನತಿ ಸಾಧ್ಯ ಎಂದರು. ನಿವೃತ್ತ ಪೊಲೀಸ್ ಅಧಿಕಾರಿ ನಾಗೇಂದ್ರ ಅವರನ್ನು ಅಭಿನಂದಿಸಲಾಯಿತು.