ಸ್ವಾತಂತ್ರ್ಯ ಉತ್ಸವ ಭಾಷಣದಲ್ಲಿ ಟಾಂಗ್, ಭ್ರಷ್ಟಾಚಾರ ಆರೋಪಕ್ಕೆ ಪ್ರತ್ಯುತ್ತರ, ಸಚಿವೆ ಶಶಿಕಲಾ ಜೊಲ್ಲೆ ಭಾವುಕ, ತಪ್ಪು ಮಾಡಿಲ್ಲ ! ಯಾವುದೇ ತನಿಖೆಗೆ ಸಿದ್ದ...!

Jolle
Published on

ವಿಜಯಪುರ: ಭ್ರಷ್ಟಾಚಾರದ ಆರೋಪ ಹೊರಿಸಿ ತಮ್ಮ ವಿರುದ್ದ ಪ್ರತಿಭಟನೆ ನಡೆಸಿದ ಮಹಿಳಾ ಸಂಘಟಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ಭಾಷಣದಲ್ಲಿ ಶರಣೆ ಅಕ್ಕಮಹಾದೇವಿ ವಚನದ ಮೂಲಕ

ಟಾಂಗ್ ನೀಡಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ‌ ಭಾನುವಾರ ಧ್ವಜಾರೋಹಣ ವೇಳೆ ಪ್ರತಿಭಟನೆ ಬಿಸಿ ಎದುರಿಸಿದ ಅವರು, ಬಳಿಕ ಧ್ವಜಾರೋಹಣ ಭಾಷಣದಲ್ಲಿ ತಿರುಗೇಟು ನೀಡಿದರು.

ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜದೊಡೆ ಎಂತಯ್ಯ, ಸಮುದ್ರ ತಡಿಯಲ್ಲೊಂದು ಮನೆಯ ಮಾಡಿ ನೆರೆ ತೊರೆಗಳಿಗೆ ಅಂಜಿದೊಡೆ ಎಂತಯ್ಯ, ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಡಚಿದೊಡೆ ಎಂತಯ್ಯ? ಚನ್ನಮಲ್ಲಿಕಾರ್ಜು ದೇವ ಕೆಳಯ್ಯ ಈ ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು" ಎಂಬ ವಚನ ಸ್ತುತಿಸಿದ ಅವರು ನಿಂದನೆ ಸ್ತುತಿ ಬರುತ್ತವೆ ಶಾಂತಿ ಸಮಾಧಾನದಿಂದ ಎದುರಿಸಿ ತೋರಿಸಬೇಕೆಂದು ಅಕ್ಕನ ವಚನ ದಿಂದ ಕಲಿತಿದ್ದೇನೆ ಎಂದರು.

ಸುಂಸ್ಕೃತ ಮನೆತನದಲ್ಲಿ ಹುಟ್ಟಿ ಇಂಥ ರಾಜಕೀಯ ಪರಿಸ್ಥಿತಿ ಯಲ್ಲಿ ಎಲ್ಲವನ್ನೂ ಎದುರಿಸಿ ನಿಲ್ಲಬೇಕಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ರೀತಿ ಪ್ರತಿಭಟನೆ ಯಾರು ಮ

ಮಾಡಿದ್ದಾರೋ ಅವರಿಗೆ ಉತ್ತರ ಕೊಡಲು ಬಯಸುತ್ತೇನೆ, ನಾನು ತಪ್ಪು ಮಾಡಿಲ್ಲ. ಹೀಗಾಗಿ ಯಾವುದೇ ತನಿಖೆಗೆ ಸಿದ್ದ. ಹೆಣ್ಣು ಮಕ್ಕಳಾಗಿ ಈ ರೀತಿ ಇನ್ನೊಂದು ಹೆಣ್ಣು ಮಗುವಿನ ಮನಸ್ಸಿಗೆ ಘಾಸಿ ಮಾಡಬಾರದು ಎಂದು ಶಶಿಕಲಾ ಜೊಲ್ಲೆ ಭಾವುಕರಾದರು.

ಅಕ್ಕಮಹಾದೇವಿ ಹಾಗೂ

ಡಾ.ಅಂಬೇಡ್ಕರ ಅವರ ಮಾರ್ಗದಲ್ಲಿ ನಡೆಯುವೆ. ಒಳ್ಳೆಯ ಕೆಲಸ ಮಾಡಿ ತೋರಿಸುವೆ ಎಂದರು.

ಅಂತಿಮವಾಗಿ "ನಾನೂ ಒಬ್ಬ ವಿಶೇಷ ಮಗುವಿನ ತಾಯಿ, ಮಕ್ಕಳ ನೋವು ನನಗಿಂತ ಹೆಚ್ಚಾಗಿ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ‌. ಹೀಗಾಗಿ ಅಂಥ ಮಕ್ಕಳೊಂದಿಗೆ ನಾನು ಸದಾ ಇರುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net