ಸ್ವಾತಂತ್ರೊೃೀತ್ಸವಕ್ಕೆ ಕೆರೆ ಗ್ರಾಪಂ ಅಧ್ಯಕ್ಷೆಗೆ ಆಹ್ವಾನ

sri gp
ಕೆರೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಗೋಪಾಲ್ ಅವರನ್ನು ಶೃಂಗೇರಿ ತಾಲೂಕು ಬಿಜೆಪಿ ಘಟಕದಿಂದ ಅಭಿನಂದಿಸಲಾಯಿತು. ಪ್ರವೀಣ್ ಪೂಜಾರಿ, ಚಂದ್ರು ಸಾಲ್ಮರ, ಗೋಪಾಲ್, ಸುಜಾತಾ ಇತರರಿದ್ದರು.
Published on

ಶೃಂಗೇರಿ: ದೆಹಲಿ ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ

ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ.

ವಿಶೇಷ ಅತಿಥಿಯಾಗಿ ಆಯ್ಕೆಗೊಂಡ ಲಕ್ಷ್ಮೀ ಗೋಪಾಲ್ ಅವರಿಗೆ ಗುರುವಾರ ತಾಲೂಕು ಬಿಜೆಪಿ ಘಟಕದಿಂದ ಗ್ರಾಪಂ ಆವರಣದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ವಕ್ತಾರ ಬಿ.ಶಿವಶಂಕರ್ ಮಾತನಾಡಿ, ಸತತ ಮೂರು ಬಾರಿ ಕೆರೆ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀ ಗೋಪಾಲ್ ಅವರ ಪ್ರಾಮಾಣಿಕ ಸೇವೆ ಜನಪ್ರತಿನಿಧಿಗಳಿಗೆ ಮಾದರಿ. ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಲಭಿಸುತ್ತದೆ. ಸರ್ಕಾರದ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ಜನರಿಗೆ ಅಧ್ಯಕ್ಷೆ ಲಕ್ಷ್ಮೀ ಗೋಪಾಲ್ ತಲುಪಿಸಿ ಗ್ರಾಮೀಣ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ವಿಧಾನಸೌಧ, ಮೈಸೂರು, ರಾಷ್ಟ್ರಪತಿ ಭವನದಲ್ಲೂ ವಿಶೇಷ ಅತಿಥಿಯಾಗಿ ಭಾಗವಹಿಸಿದ ಲಕ್ಷ್ಮೀ ಅವರ ಸಾಧನೆ ರಾಜ್ಯಕ್ಕೂ ಹೆಮ್ಮೆ ಎಂದರು.

ಗುತ್ತಿಗೆದಾರ ಪ್ರದೀಪ್ ಕೂಳಗದ್ದೆ ಮಾತನಾಡಿ, ಕೆರೆ ಗ್ರಾಪಂನಲ್ಲಿ ಮೂರನೇ ಬಾರಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಲಕ್ಷ್ಮೀ ಅವರ ಬದ್ಧತೆ ಶ್ಲಾಘನೀಯ. ಮಹಿಳೆಯಾಗಿ ಕೌಟುಂಬಿಕ ನಿರ್ವಹಣೆ ಜತೆ ಜನರ ಸಮಸ್ಯೆಗಳಿಗೆ ಆದ್ಯತೆ ನೀಡುವ ಅವರ ದಕ್ಷತೆ ಮಾದರಿ ಎಂದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮಾತನಾಡಿ, ಮಹಿಳೆಯರು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಅವರ ಸಾಧನೆಯನ್ನು ಸಮಾಜ ಗುರುತಿಸುತ್ತದೆ. ನನಗೆ ಲಭಿಸಿದ ಅವಕಾಶ, ಗೌರವವನ್ನು ನನ್ನ ಮೇಲೆ ಅಭಿಮಾನವಿಟ್ಟ ಮತದಾರರಿಗೆ, ಪ್ರೋತ್ಸಾಹ ನೀಡುತ್ತಿರುವ ಬಿಜೆಪಿ ಹಾಗೂ ಪತಿ ಗೋಪಾಲ್ ಅವರಿಗೆ ಸಮರ್ಪಿಸುತ್ತಿದ್ದೇನೆ ಎಂದರು.

ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾಗೇಂದ್ರ, ತಾಪಂ ಮಾಜಿ ಅಧ್ಯಕ್ಷೆ ಜಯಶೀಲಾ, ಪಪಂ ಸದಸ್ಯೆ ವಿದ್ಯಾ ಶ್ರೀಧರ್, ಮಾಜಿ ಸದಸ್ಯೆ ಸುಜಾತಾ, ಎಸ್ಸಿ ಮೋರ್ಚಾ ಅಧ್ಯಕ್ಷ ವೈ.ಬಿ.ಸುರೇಶ್, ಪ್ರಧಾನ ಕಾರ್ಯದರ್ಶಿ ರಮೇಶ್, ಕೆರೆ ಗ್ರಾಪಂ ಉಪಾಧ್ಯಕ್ಷ ನವೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net