ಸ್ವಾತಂತ್ರೃ,ಹಿರಿಯರ ಹೋರಾಟದ ಪ್ರತಿಫಲ

CTD 15 SRS--05
Published on


ಚಿತ್ರದುರ್ಗ: ಆಂಗ್ಲರ ಗುಲಾಮಗಿರಿಯಿಂದ ದೇಶ ಬಿಡುಗಡೆ ಆಗದಿದ್ದರೆ ನಾವಿಂದು ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಸ್ವಾ ತಂತ್ರ್ಯ, ನಮ್ಮ ಹಿರಿಯರ ಹೋರಾಟ,ತ್ಯಾಗ,ಬಲಿದಾನಗಳ ಪ್ರತಿಫಲವಾಗಿದೆ ಎಂದು ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಕಾರ‌್ಯದರ್ಶಿ ಸುಜಾತ ಲಿಂಗಾರೆಡ್ಡಿ ಹೇಳಿದರು. ಸಂಸ್ಥೆ ಆವರಣದಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇ ರಿಸಿ ಮಾತನಾಡಿದ ಅವರು,ಮಕ್ಕಳು ಈ ದೇಶದ ಸಂಪತ್ತು.ಪುಣ್ಯಭೂಮಿ ಭಾರತದಲ್ಲಿ ನಾವೆಲ್ಲರೂ ಸಹಬಾಳ್ವೆ ಸಂಕಲ್ಪವನ್ನು ಕೈಗೊಳ್ಳಣ ಎಂದರು.
ನಟ,ಸಂಸ್ಕಾರ ಭಾರತೀ ಪ್ರಾಂತೀಯ ಅಧ್ಯಕ್ಷ ಸುಚೇಂದ್ರಪ್ರಸಾದ್ ಅವರು ಮಾತನಾಡಿ,ಮುಂದುವರಿದ ಜಗತ್ತಿನ ಯಾವ ರಾಷ್ಟ್ರದ ಲ್ಲೂ ಭಾರತದಂಥ ವೈಭವದ ದೇಶ ಮತ್ತೊಂದಿಲ್ಲ. ಚಿತ್ರದುರ್ಗ ಜಿಲ್ಲೆಯ ಇತಿಹಾಸ,ಸ್ವಾತಂತ್ರೃಕ್ಕಾಗಿ ನಡೆದ ಹೋರಾಟದ ಪುಟಗಳಲ್ಲಿ ಅವಿಸ್ಮರಣಿಯವಾಗಿದೆ.
ನಿವೃತ್ತ ಯೋಧ ಹರಿನಾಥನ್,2022ರ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾರತೀಯ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ರಕ್ಷಿತಾ ಅವರನ್ನು ಗೌರವಿಸಲಾಯಿತು. ಸಂಸ್ಥೆ ಉಪಧ್ಯಾಕ್ಷ ಬಿ.ಎಲ್.ಅಮೋಘ್,ಪ್ರಾಚಾರ‌್ಯ ಪ್ರಭಾಕರ್ ಮತ್ತಿತರರು ಇದ್ದರು.
ಆಸ್ಕರ್ ಫರ್ನಾಂಡಿಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್
ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಸ್ಕರ್‌ಫರ್ನಾಂಡಿಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಸ್ವಾತಂತ್ರ್ಯದಿನವನ್ನು ಆ ಚರಿಸಲಾಯಿತು. ನಿವೃತ್ತ ಅಪರಾಧಶಾಸ್ತ್ರ ಉಪನ್ಯಾಸಕ ಡಾ.ನಟರಾಜ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂಸ್ಥೆ ಆ ಡಳಿತಧಿಕಾರಿ ಡಾ.ಟಿ.ಎಸ್.ರವಿ,ಶಾಲಾ ಆಡಳಿತಧಿಕಾರಿ ಡಾ.ಚಿನ್ಮಯ ಸಿ.ಸಾಲಿಮಠ,ಪ್ರಾಚಾರ‌್ಯೆ ಪದ್ಮಾವತಿ,ಶೈಕ್ಷಣಿಕ ಸಂಯೋಜಕಿ ಕಾವ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net