

ಚಿತ್ರದುರ್ಗ: ಮಹಾತ್ಮಗಾಂಧೀಜಿ ದೇಶಕ್ಕೆ ಸ್ವಾತಂತ್ರೃವನ್ನು ತಂದು ಕೊಟ್ಟಿದ್ದರೆ,ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು,ಸ್ವಾತಂತ್ರೃ ಮತ್ತು ಸಂವಿಧಾನ ದೇಶದ ಪ್ರಜಾಪ್ರಭುತ್ವದ ಅಡಿಪಾಯಗಳಾಗಿವೆ ಎಂದು ಕುಡಾ ಅಧ್ಯಕ್ಷ ಎಂ.ಕೆ.ತಾ ಜ್‌ಪೀರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹ ದ್ದೂರ್ ಶಾಸ್ತ್ರೀಜಿ ಅವರ ಜಯಂತಿಯಲ್ಲಿ ಮಾತನಾಡಿ,ಗಾಂಧಿ,ಅಂಬೇಡ್ಕರ್, ನೆಹರು, ಲಾಲ್‌ಬಹದ್ದೂರ್‌ಶಾಸ್ತ್ರಿ ಇವರುಗಳಿಗೆ ಬೇರೆ ಯಾ ರು ಸಾಟಿಯಿಲ್ಲ. ಅವರ ವ್ಯಕ್ತಿತ್ವಗಳು ಹಿರಿದಾಗಿವೆ. ಹಿರಿಯರ ತತ್ವ ಸಿದ್ದಾಂತಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮೈಗೂಡಿಸಿಕೊಳ್ಳ ಬೇಕೆಂದರು.
ಸತ್ಯ ಮತ್ತು ಅಹಿಂಸೆಯನ್ನು ಅಸ್ತ್ರವಾಗಿರಿಸಿಕೊಂಡು ಬ್ರಿಟಿಷರ ವಿರುದ್ಧ ಮಹಾತ್ಮಗಾಂಧಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯತಂದು ಕೊಟ್ಟಿ ದ್ದಾರೆ.ಆದರೆ ಇಂದು ಎಲ್ಲೆಡೆ ದ್ವೇಷ,ಅಸೂಯೆ ತುಂಬಿರುವುದಾಗಿ ಕುಡಾ ಮಾಜಿ ಅಧ್ಯಕ್ಷೆ ಆರ್.ಕೆ.ಸರ್ದಾರ್ ಬೇಸರ ವ್ಯಕ್ತಪಡಿಸಿದರು. ತ್ಯಾಗ ಬಲಿದಾನವೇ ನಿಜವಾದ ಹೋರಾಟ. ಲಾಲ್‌ಬಹದ್ದೂರ್‌ಶಾಸ್ತ್ರಿ ಅವರು ಜೈಜವಾನ್,ಜೈಕಿಸಾನ್ ಎನ್ನುವ ಪರಿಕಲ್ಪನೆಯೊಂದಿಗೆ ರೈತರ ಏಳಿಗೆಗೆ ಶ್ರಮಿಸಿದ್ದರು ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ‌್ಯಧ್ಯಕ್ಷ ಕೆ.ಎಂ.ಹಾಲಸ್ವಾಮಿ,ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್,ಮ ಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾನಂದಿನಿಗೌಡ,ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ ಮಾತನಾಡಿದರು. ವಕೀಲರಾದ ಮಹಮದ್ ರಫಿ,ಸುದರ್ಶನ್,ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ,ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ,ಕೆ.ಪಿ.ಸಂಪತ್‌ಕುಮಾರ್, ಸೈಯದ್ ಮೊಹಿದ್ದೀನ್,ಯು.ಲಕ್ಷ್ಮೀಕಾಂತ್,ಆರ್.ಪ್ರಕಾಶ್ ಸೈಯದ್‌ವಲಿಖಾದ್ರಿ,ಜಿ.ವಿ.ಮಧುಗೌಡ,ಎಲ್.ಕೆ.ರಾಬರ್ಟ್,ಸೈಯದ್ ಖುದ್ದೂಸ್,ಎನ್.ಬಿ.ಟಿ.ಜಮೀರ್,ಎ.ಸಾಧಿಕ್‌ವುಲ್ಲಾ,ಪವಿತ್ರಾ,ಮುದಾಸಿರ್ ನವಾಜ್,ನೇತ್ರಾವತಿ,ಮಂಜುನಾಥಗುಪ್ತ, ಎ.ಜಾಕಿರ್ ಹುಸೇನ್ ಇತರರು ಇದ್ದರು.