

ಕೊಡೇಕಲ್: ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ಇತಿಹಾಸ ರೋಚಕವಾಗಿದ್ದು, ಅವರ ಬದುಕು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.
ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆ ಸವಿ ನೆನಪಿಗಾಗಿ ಗ್ರಾಮದ ಸ್ವಾತಂತ್ರö್ಯ ಹೋರಾಟಗಾರ ಸಂಗಪ್ಪ ಮಂಟೆ ಅವರನ್ನು ಶುಕ್ರವಾರ ಜಿಲ್ಲಾಡಳಿತದಿಂದ ಸನ್ಮಾನಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರÈಕ್ಕಾಗಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಂತಹ ಇಂತಹ ಹೋರಾಟಗಾರರ ಆದರ್ಶ ಇಂದಿನ ಯುವಕರಿಗೆ ಮಾದರಿಯಾಗಲಿ ಎಂದರು.
ಜಿಲ್ಲೆಯಲ್ಲಿ ನಾಲ್ವರು ಸ್ವಾಂತತ್ರö್ಯ ಹೋರಾಟಗಾರರಲ್ಲಿ ಈಗ ಕೇವಲ ಸಂಗಪ್ಪ ಮಂಟೆ ಅವರು ಮಾತ್ರ ನಮ್ಮ ನಡುವೆ ಇದ್ದಾರೆ. ಹೋರಾಟದ ಸವಿನೆನಪಿಗಾಗಿ ಅವರನ್ನು ಸನ್ಮಾನಿಸಲು ಸರ್ಕಾರ ಸೂಚಿಸಿದ್ದರಿಂದ ಸನ್ಮಾನಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತ ಸ್ವಾತಂತ್ರÈ ಹೋರಾಟಗಾರರ ಹಿತ ಕಾಯಲು ಸಾದಾ ಬದ್ಧವಾಗಿದೆ. ಅಲ್ಲದೆ ಅವರನ್ನು ಸನ್ಮಾನಿಸುವ ಭಾಗ್ಯ ನನಗೆ ಲಭಿಸಿರುವುದು ನನ್ನ ಸುದೈವವಾಗಿದೆ ಎಂದರು.
ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ನಾಡ-ಕಚೇರಿ ಉಪ-ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಕಂದಾಯ ಇಲಾಖೆ ಅಧಿಕಾರಿ ಶಾಂತಗೌಡ, ಪಿಡಿಒ ಸಂಗಣ್ಣ ನಾಗಬೇನಾಳ, ಪರಮಣ್ಣ ಹೂಗಾರ, ಪಿಎಸ್‌ಐ ಅಯ್ಯಪ್ಪ, ವಿಎಗಳಾದ ವಿಜಯಲಕ್ಷ್ಮೀ, ದೀಪ್ತಿ, ಸಂಗಪ್ಪ ಶಿವಪುರ, ಬಸಪ್ಪ ಮಂಟೆ, ಸಂಗಯ್ಯ ಮಂಟೆ, ಕರವೇ ತಾಲೂಕಾಧ್ಯಕ್ಷ ರಮೇಶ ಬಿರಾದಾರ, ಚಂದ್ರಶೇಖರ ಹಾವೇರಿ, ನಿಂಗು ಬೂದಿಹಾಳ ಇತರರಿದ್ದರು.