ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸೋಣ

Untitled
Published on

ಹುಲಸೂರು: ದೇಶ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿ ಜೀವನ ತ್ಯಾಗ ಮಾಡಿದ ಮಹಾನ್ ಹೋರಾಟಗಾರರನ್ನು ನಾವು ಸದಾ ಸ್ಮರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಧಬಾಲೆ ಹೇಳಿದರು. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಕರ್ನಾಟಕ ಜಾನಪದ ಪರಿಷತ್ ಭಾನುವಾರ ಏರ್ಪಡಿಸಿದ್ದ ನಮ್ಮ ಮಣ್ಣು ನನ್ನ ದೇಶ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಶಿವರಾಜ ಖಪಲೆ ಮಾತನಾಡಿ, ದೇಶಕ್ಕಾಗಿ ಹಲವರು ತ್ಯಾಗ ಬಲಿದಾನ ಮಾಡಿದ್ದಾರೆ. ವೀರಮರಣ ಅಪ್ಪಿದ ಸ್ವಾತಂತ್ರÈ ಹೋರಾಟಗಾರರ ಬಗ್ಗೆ ತಿಳಿಸಿಕೊಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು. ಆಕಾಶ ಖಂಡಾಳೆ ಮಾತನಾಡಿದರು.ಪ್ರಮುಖರಾದ ಸೂರ್ಯಕಾಂತ ಪಾಟೀಲ್, ರಾಜಪ್ಪ ನಂದೋಡೆ, ಮೌನೇಶ ಪಂಚಾಳ, ಸಚಿನ್ ವಗ್ಗೆ, ನಾಗೇಶ ನಿಲಂಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net