ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನ

19Rajesh1
Published on

ಚಾಮರಾಜನಗರ: ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಉಡಿಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ‘ಸ್ವಸ್ಥ ನಾರಿ ಸಶಕ್ತ ಪರಿವಾರ’ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಅಭಿಯಾನದಲ್ಲಿ ಉಡಿಗಾಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸಿ.ಎಸ್.ಉಮಾರಾಣಿ ಮಾತನಾಡಿ, ಮಹಿಳೆಯರಲ್ಲಿ ಋತುಚಕ್ರ ಸಾಮಾನ್ಯ ಪ್ರಕ್ರಿಯೆಯಾಗಿದೆ. ಋತುಚಕ್ರ ಸಮಯದಲ್ಲಿ ಯುವತಿಯರು ಶುಚಿತ್ವದಿಂದ ಇರಬೇಕು, ರಕ್ತಹೀನತೆ ತಡೆಗಟ್ಟುವ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಗಳನ್ನು ಪಡೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಪಿಎಚ್‌ಸಿಒ ಆರ್.ಲತಾ ಮಾತನಾಡಿ, ಪ್ರೌಢವಸ್ಥೆಗೆ ಬರುವ ಹೆಣ್ಣು ಮಕ್ಕಳಲ್ಲಿ ಪ್ರತಿ ತಿಂಗಳು 3 ರಿಂದ 7 ದಿನಗಳ ತನಕ ಋತುಸ್ರಾವವಾಗುತ್ತದೆ. ಈ ವೇಳೆಯಲ್ಲಿ ಭಯಪಡದೆ, ಶುದ್ಧತೆಯಿಂದ ಇರಬೇಕು. ದಿನಕ್ಕೆ ಎರಡು ಭಾರಿ ಸ್ನಾನ ಮಾಡಬೇಕು , ಪೌಷ್ಟಿಕಾಂಶ ಆಹಾರ ಸ್ವೀಕರಿಬೇಕು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ 107 ಹೆಣ್ಣು ಮಕ್ಕಳಿಗೆ ಅನಿಮಿಯಾ ತಪಾಸಣೆ ಮಾಡಿಸಲಾಯಿತು. ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net