ಸ್ವಸ್ಥ ಸಮಾಜ ನಿಮರ್ಾಣದಲ್ಲಿ ಪತ್ರಿಕೆಗಳ ಪಾತ್ರ ಹಿರಿದು

IMG-20220819-WA0059
Published on

ಔರಾದ್: ಸ್ವಸ್ಥ ಹಾಗೂ ಪಾರದರ್ಶಕ ಸಮಾಜ ನಿಮರ್ಾಣದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.

ತಾಪಂ ಸಭಾಂಗಣದಲ್ಲಿ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನರು ಪತ್ರಿಕೆಗಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದು, ಸುಂದರ ಸಮಾಜ ನಿಮರ್ಾಣದಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ. ಪಟ್ಟಣದಲ್ಲಿ ಪತ್ರಿಕಾ ಭವನ ನಿಮರ್ಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ಗಡಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಪತ್ರಕರ್ತರ ಕಾಣಿಕೆ ಅಮೋಘವಾಗಿದೆ. ಸಕರ್ಾರ ವಿವಿಧ ರೀತಿಯಲ್ಲಿ ಪತ್ರಕರ್ತರಿಗೆ ನೆರವಾಗಬೇಕಿದೆ. ಪ್ರಸ್ತುತ ಸಮಾಜದಲ್ಲಿ ಅನೇಕ ಬಗೆಯ ಮಾಧ್ಯಮಗಳ ಪ್ರವೇಶವಾಗುತ್ತಿದ್ದರೂ ನಿಖರತೆ ಮತ್ತು ಸತ್ಯ ಸಂಗತಿಗಳ ಸುದ್ದಿಗಳಿಗೆ ಜನಮನ್ನಣೆ ಇದೆ ಎಂಬುದು ಅಲ್ಲಗಳೆಯುವಂತಿಲ್ಲ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಶಿವಕುಮಾರ ಸ್ವಾಮಿ ಮಾತನಾಡಿ, ನಿಸ್ವಾರ್ಥ, ನಿಷ್ಕಲ್ಮಷ ಭಾವದಿಂದ ಪತ್ರಿಕೆಗಳು ಮುನ್ನಡೆಸುವುದು ಒಂದು ರೀತಿಯ ಸಾಹಸವೇ ಸರಿ. ಜನರ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ತರದಂತೆ ಕೆಲಸ ಮಾಡುವುದು ಪತ್ರಿಕೆ ಮತ್ತು ಪತ್ರಕರ್ತರಿಗೂ ಗೌರವದ ವಿಷಯವಾಗಿದೆ ಎಂದರು.

ಶ್ರೀ ವೇದಮೂತರ್ಿ ಗುರುಪಾದಯ್ಯ ಶಾಸ್ತ್ರಿ ಹಾನಗಲ್ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪಪಂ ಅಧ್ಯಕ್ಷೆ ಅಂಬಿಕಾ ಪವಾರ್, ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಹಿರಿಯ ವರದಿಗಾರ ಅಪ್ಪಾರಾವ ಸೌದಿ, ತಾಪಂ ಇಒ ಬಿರೇಂದ್ರ ಸಿಂಗ್, ಸಿಪಿಐ ಮಲ್ಲಿಕಾಜರ್ುನ ಇಕ್ಕಳಕಿ, ಅನೀಲಕುಮಾರ ದೇಶಮುಖ, ಎಂ.ಪಿ.ಮುದಾಳೆ, ಸಂತೋಷ ಚಟ್ಟೆ, ಸಂಘದ ತಾಲೂಕು ಅಧ್ಯಕ್ಷ ರವೀಂದ್ರ ಮುಕ್ತೆದಾರ್, ಕಮಲನಗರ ತಾಲೂಕು ಅಧ್ಯಕ್ಷ ಮನೋಜ ಹಿರೇಮಠ, ತಾಲೂಕು ಪ್ರಧಾನ ಕಾರ್ಯದಶರ್ಿ ಬಸವರಾಜ ಶಿವಪೂಜೆ, ಮಲ್ಲಪ್ಪ ಗೌಡ, ರಾಚಯ್ಯ ಸ್ವಾಮಿ, ಶ್ರೀಕಾಂತ ಹುಂಡೇಕರ್, ಅಮರೇಶ್ವರ ಚಿದ್ರೆ, ಅಮರ ಸ್ವಾಮಿ, ಅಂಬಾದಾಸ ನಳಗೆ, ಶಾಲಿವಾನ ಉದಗಿರೆ, ಬಾಲಾಜಿ ಅಮರವಾಡಿ, ಶಿವಕುಮಾರ ಬಿರಾದಾರ್, ಅಲಿಂ ಪಾಶಾ, ಸುಧೀರ ಪಾಂಡ್ರೆ ಇತರರಿದ್ದರು. ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net