ಸ್ವಸಹಾಯ ಸಂಘಗಳಿಗೆ ಸೇರ್ಪಡೆಗೊಳ್ಳಿ

nrp sanga
ಮೆಣಸೂರು ಗ್ರಾಪಂನಲ್ಲಿ ಸಂಜೀವಿನಿ ಒಕ್ಕೂಟದ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಡಯಾನಾ ಜಾರ್ಜ್ ಉದ್ಘಾಟಿಸಿದರು. ಡಿ.ಆರ್.ಶ್ರೀನಾಥ್, ಉಮಾ, ಎನ್.ಡಿ.ಪ್ರಸಾದ್, ಯಾಸ್ಮೀನ್, ರಶ್ಮಿ, ಸಂಧ್ಯಾ, ಮೇರಿ, ಸಂತೋಷ್‌ಕುಮಾರ್ ಇತರರಿದ್ದರು.
Published on

ಎನ್.ಆರ್.ಪುರ: ಅರ್ಹ ಮಹಿಳೆಯರನ್ನು ಸ್ವಸಹಾಯ ಸಂಘಗಳಿಗೆ ಸೇರ್ಪಡೆಗೊಳಿಸಬೇಕು ಎಂದು ಎನ್‌ಆರ್‌ಎಲ್‌ಎಂ ಯೋಜನೆ ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ ತಿಳಿಸಿದರು.

ಬುಧವಾರ ಮೆಣಸೂರು ಗ್ರಾಪಂನಲ್ಲಿ ನಡೆದ ಮೆಣಸೂರು ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಒಕ್ಕೂಟದಿಂದ ದೊರೆಯುವ ಸಾಲ ಸೌಲಭ್ಯವನ್ನು ಸ್ವಸಹಾಯ ಸಂಘದ ಮಹಿಳೆಯರು ಇನ್ನೂ ಹೆಚ್ಚಿನದಾಗಿ ಉಪಯೋಗಿಸಿಕೊಳ್ಳಬೇಕು. ಸಂಘದ ಮಹಿಳೆಯರು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಮತ್ತು ಮಹಿಳಾ ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಗ್ರಾಮ ಪಂಚಾಯತಿಯಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಿ ಎಂದು ತಿಳಿಸಿದರು.

ವಕೀಲ ಇ.ಸಿ.ಜೋಯಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ, ಲಿಂಗ ಅಸಮಾನತೆ ಇವೆಲ್ಲವನ್ನೂ ಕಾನೂನ ಮುಖೇನ ತಡೆಯಬಹುದಾಗಿದೆ. ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಸ್ವಾಸ್ಥೃ ಹದಗೆಡುತ್ತಿದೆ. ಆದ್ದರಿಂದ ಇಲಾಖೆಯಿಂದ ಮಾದಕಮುಕ್ತ ಕರ್ನಾಟಕ ಅಭಿಯಾನ ನಡೆಸುವುದರ ಮೂಲಕ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಅರಿವು ಮೂಡಿಸಲಾಗುತ್ತಿದೆ ಎಂದರು.

ಮೆಣಸೂರು ಗ್ರಾಪಂ ಸದಸ್ಯರಾದ ಡಿ.ಆರ್.ಶ್ರೀನಾಥ್, ಉಮಾ, ಎನ್.ಡಿ.ಪ್ರಸಾದ್, ಯಾಸ್ಮೀನ್, ಪಿಡಿಒ ಸಂತೋಷ್‌ಕುಮಾರ್, ಒಕ್ಕೂಟದ ಅಧ್ಯಕ್ಷೆ ಡಯಾನಾ ಜಾರ್ಜ್, ಉಪಾಧ್ಯಕ್ಷೆ ರಶ್ಮಿ, ಮೇರಿ, ಸಂಧ್ಯಾ, ಚೇತನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net