ಸ್ವಸಹಾಯ ಸಂಘಗಳಿಂದ ಮಹಿಳೆಯರು ಸದೃಢ

17M.D.R.1
ಮದ್ದೂರಿನಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಟೇಲಾ,್ಲ ಸೆಲ್ವಿ ಮುರುಗೇಶ್, ಲಕ್ಷ್ಮಮ್ಮ ಶ್ರೀನಿವಾಸ ಅವರನ್ನು ಅಭಿನಂದಿಸಲಾಯಿತು. ಲತಾರಾಮು, ಲಕ್ಷ್ಮಮ್ಮ, ಸುನಂದಾ ಇತರರು ಇದ್ದರು.
Published on

ಮದ್ದೂರು: ಮಹಿಳೆಯರು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢಗೊಳ್ಳುತ್ತಿರುವುದು ಮೆಚ್ಚುಗೆಯ ಸಂಗತಿ ಎಂದು ಒಡಿಪಿ ಸಂಸ್ಥೆ ಜಿಲ್ಲಾಧ್ಯಕ್ಷೆ ಸೆಲ್ವಿ ಮುರುಗೇಶ್ ಹೇಳಿದರು.

ಶಿವಪುರದ ಸೌಜನ್ಯ ಕೇಂದ್ರ ಸಮಿತಿ, ಮೈತ್ರಿ, ಮಧುರ, ಮಂದಾರ, ಪಲ್ಲವಿ, ಗಗನ ಸಂಘಗಳ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಾಲ ಪಡೆದುಕೊಂಡ ಮಹಿಳೆಯರು ಸಣ್ಣ, ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿರುವುದು ಸಂತೋಷದ ವಿಷಯ ಎಂದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಆದರೆ ಆಧುನಿಕ ದಿನಗಳಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆಗಳು ಕಡಿಮೆಯಾಗಿಲ್ಲ. ಹೀಗಾಗಿ ಸರ್ಕಾರಗಳು ಮಹಿಳೆಯರ ಮೇಲಿನ ದೌರ್ಜನ ತಡೆಗಟ್ಟಲು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಟೇಲಾ,್ಲ ಸೆಲ್ವಿ ಮುರುಗೇಶ್, ಲಕ್ಷ್ಮಮ್ಮ ಶ್ರೀನಿವಾಸ ಅವರನ್ನು ಅಭಿನಂದಿಸಲಾಯಿತು. ಪುರಸಭಾ ಸದಸ್ಯೆ ಲತಾರಾಮು, ಲಕ್ಷ್ಮಮ್ಮ, ಸುನಂದಾ, ವೀಣಾ, ಭಾಗ್ಯಮ್ಮ, ರಾಜೇಶ್ವರಿ, ಶಾಂತಮ್ಮ, ಮಂಗಳಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net